- Advertisement -
ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಕೈಗಾರಿಕೋದ್ಯಮಿಗಳಿಗೆ ನಷ್ಟವಾಗಗಿದೆ. ಜೊತೆಗೆ ಚೀನಾದಿಂದ ಸಾವಿರಾರು ಕಂಪನಿಗಳು ಕಾಲ್ತೆಗೆಯುತ್ತಿವೆ ಅವರನ್ನ ಭಾರತಕ್ಕೆ ಆಕರ್ಷಣೆ ಮಾಡುವ ದೃಷ್ಟಿಯಿಂದ ಉತ್ತರ ಭಾರತದ ರಾಜ್ಯಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯ ಸರ್ಕಾರಗಳು ಕಾರ್ಮಿಕರ ಹಕ್ಕುಗಳನ್ನ ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗಿವೆ. 3 ವರ್ಷಗಳ ಕಾಲ ಕಾರ್ಮಿಕರ ಬಹುತೇಕ ಹಕ್ಕುಗಳಿಗೆ ಉತ್ತರಪ್ರದೇಶ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಗುಜರಾಥ್ ಸರ್ಕಾರಗಳು ಕತ್ತರಿ ಹಾಕಿವೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಗುತ್ತಿಗೆ ನೌಕರರಿಗೆ ಇದ್ದ ಹಕ್ಕುಗಳನ್ನ ಕಸಿದುಕೊಂಡಿರುವುದಲ್ಲದೇ ಸರಿಯಾಧ ಸಮಯಕ್ಕೆ ಸಂಬಳ ಕೇಳುವ ಅಧಿಕಾರನ್ನೂ ಮೊಟಕು ಗೊಳಿಸಿರುವುದು ಬಹಳಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
- Advertisement -