- Advertisement -
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ನಾಳೆ ಮತ್ತೆ ಹಾಜರಾಗುವಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೂಚಿಸಲಾಗಿದೆ. ಎರಡನೇ ದಿನ, ಅವರನ್ನು 10 ಗಂಟೆಗಳ ಕಾಲ ಪ್ರಶ್ನಿಸಲಾಯಿತು.
ನಿನ್ನೆಯಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು, ಇಡಿ ವಿಚಾರಣೆ ನಡೆಸುತ್ತಿದೆ. ನಿನ್ನೆ 10 ಗಂಟೆ ಕಾಲ ವಿಚಾರಣೆ ನಡೆಸಿದ್ದಂತ ಇಡಿ ಅಧಿಕಾರಿಗಳು, ಇಂದು ಕೂಡ 10 ಗಂಟೆಯ ಕಾಲ ಪ್ರಕರಣ ಸಂಬಂಧ ವಿಚಾರಣೆ ನಡೆಸಿದರು.
ಇಂದಿನ ವಿಚಾರಣೆ ಮುಗಿಸಿ, ಇಡಿ ಕಚೇರಿಯಿಂದ ಅವರು ತೆರಳಿದ್ದು, ಮತ್ತೆ ನಾಳೆ ಕೂಡ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಹೀಗಾಗಿ ರಾಹುಲ್ ಗಾಂಧಿಯವರನ್ನು ನಾಳೆ ಕೂಡ ವಿಚಾರಣೆಯನ್ನು ಇಡಿ ನಡೆಸಲಿದೆ.
- Advertisement -