Political
ಕಳೆದ ಮೂರು ತಿಂಗಳಿನಿಂದ ಭಾರತ ಜೋಡೋ ಯಾತ್ರೆಯ ಮೂಲಕ ಚುನಾವಣಾ ಪ್ರಚಾರ ಮಾಡುತ್ತಾ ದೇಶದ ತುಂಬಾ ಪಾದಯಾತ್ರೆ ಮಾಡುತ್ತಿರುವ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ ಸಾಮಾನ್ಯರ ಜೊತೆಗೆ ಬೆರೆಯುವ ಮೂಲಕ ಐಷಾರಾಮಿ ಬದುಕನ್ನು ಬದಿಗಿಟ್ಟು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ .
ಹಳ್ಳಿಗಳ ಜನರ ಪ್ರಿತಿಯ ಮಾತಿನಿಂದ , ಗ್ರಾಮೀಣ ಪರಿಸರದಲ್ಲಿ ಪ್ರತಿದಿನವು ರಾತ್ರಿ ವಾಸ್ತವ್ಯ ಹೂಡುವುದರ ಮೂಲಕ ಜನಸಾಮಾನ್ಯರ ಪ್ರೀತಿಗೆ ಮಾರು ಹೋಗಿ ಅವರು ತಮ್ಮ ಜೀವನದಲ್ಲಿ ತುಂಬಾ ಬದಲಾವಣೆ ತಂದುಕೊಂಡು ಕತೆ ಕಾಣುತ್ತಿದೆ.
ಯಾಕೆಂದರೆ ರಾಹುಲ್ ಗಾಂಧಿಯವರ ವಯಸ್ಸು ಐವತ್ತು ದಾಟಿದರೂ ಈಗಲು ಕ್ಲೀನ್ ಶೇವ್ ಮಾಡಿಸಿಕೊಂಡು ಖಾದಿ ಬಟ್ಟೆ ಉಟ್ಟು ಸದಾ ನವ ಯುವಕನಂತೆ ಕಾಣುತ್ತಿದ್ದ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಂಡಾಗಿನಿಂದ ತಮ್ಮ ಬಾಹ್ಯ ಸೌಂದರ್ಯದ ಕಡೆ ಗಮನ ಕೊಡದೆ ಆಧ್ಯಾತ್ಮದ ಕಡೆಗೆ ವಾಲುತ್ತಿರುವ ಹಾಗೆ ಕಾಣಿಸುತ್ತಿದೆ.ಮುಖದ ತುಂಬಾ ಗುಡ್ಡ ಬಿಟ್ಟು ಹಣೆಗೆ ಗಂಧ ಹಚ್ಚಿ ರಸ್ತೆಯ ಮೇಲೆ ನಡೆದುಕೂಂಡು ಹೋಗುತ್ತಿರುವುದನ್ನು ನೋಡುತ್ತಿದ್ದರೆ ಹಿಮಾಲಯದ ತಪಸ್ವಿಗಳು ಲೋಕ ಸಂಚಾರ ಮಾಡೆತ್ತಿದ್ದಾರೆ ಎನ್ನುವಂತಿದೆ ಅವರ ಮುಖಭಾವ
ಭಾನುವಾರ ಸಂಜೆ ಧರ್ಮನಗರಿಯ ಕುರುಕ್ಷೇತ್ರ ತಲುಪಿದ ರಾಹುಲ್ ಗಾಂಧಿ ಅವರು, ಕುರುಕ್ಷೇತ್ರದ ಬ್ರಹ್ಮ ಸರೋವರದಲ್ಲಿ ತಮ್ಮ ಹರಕೆಯನ್ನು ತೀರಿಸಿದರು. ಇದೇ ಸಮಯದಲ್ಲಿ ಆರತಿ ಮಾಡುತ್ತಿರುವ ಫೋಟೋವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಜೊತೆಗೆ ಶೀರ್ಷಿಕೆಯಲ್ಲಿ ರಾಹುಲ್ ಗಾಂಧಿ, “ಇಂದು ನನಗೆ ಕುರುಕ್ಷೇತ್ರದಲ್ಲಿ ಬ್ರಹ್ಮ ಸರೋವರಕ್ಕೆ ಆರತಿ ಮಾಡುವ ಅವಕಾಶ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.ಈ ವೇಳೆ ಸನ್ಯಾಸಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾನ್‌ಸ್ಟೇಬಲ್ ಪತ್ರ ಫುಲ್ ವೈರಲ್..! ಏನಿತ್ತು ಗೊತ್ತಾ ಆ ಪತ್ರದಲ್ಲಿ..?!
ಹುಬ್ಬಳ್ಳಿ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಸಿ.ಎಸ್.ಆರ್ ಮೂಲಕ 5 ಕೋಟಿ ರೂ: ಸಿಎಂ.ಬೊಮ್ಮಾಯಿ