Thursday, November 21, 2024

Latest Posts

ರಾಹುಲ್ ಗಾಂಧಿ ಭಾರತದ ವಿರೋಧಿ ಪ್ರತ್ಯೇಕತಾವಾದಿ ನಾಯಕರಾಗಲು ಹೊರಟಿದ್ದಾರೆ: ಯೋಗಿ ಆದಿತ್ಯನಾಥ್

- Advertisement -

Political News: ರಾಹುಲ್ ಗಾಂಧಿ ಹಲವು ಬಾರಿ ವಿದೇಶಕ್ಕೆ ಹೋಗಿ, ಭಾರತದ ಬಗ್ಗೆ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಈ ಬಾರಿಯೂ ಹಾಗೇ ಮಾಡಿದ್ದು, ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್‌ನವರು ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕು, ಅಡುಗೆ ಮಾಡಿಕೊಂಡು ಇರಬೇಕು ಎನ್ನುತ್ತಾರೆ. ಆದ್ರೆ ಕಾಂಗ್ರೆಸ್ ಹೆಣ್ಣು ಮಕ್ಕಳು ಮನೆಯಿಂದ ಹೊರಬಂದು, ಸಮಾಜದ ಎದುರು ಧೈರ್ಯದಿಂದ ಬದುಕಬೇಕು ಎಂದು ಹೇಳತ್ತೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇಂದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ ಎನ್ನುವುದಕ್ಕೆ ಉದಾಹರಣೆ ಸಿಖ್‌ರಿಗೆ ಪೇಟ ತೊಡಲು ಕೂಡ ಸ್ವಾತಂತ್ರವಿಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಭಾರತದ ವಿರೋಧಿ ಪ್ರತ್ಯೇಕತಾವಾಾದಿ ನಾಯಕರಾಗಲು ಹೊರಟಿದ್ದಾರೆ. ಭಾರತದ ಏಕತೆ, ಸಮಗ್ರತೆ, ಸಾಾಮಾಜಿಕ ಸಾಮರಸ್ಯವನ್ನು ನಾಶಪಡಿಸುವುದು ಮತ್ತು ದೇಶವನ್ನು ಅಂತರ್ಯುದ್ಧದತ್ತ ತಳ್ಳುವುದು ರಾಹುಲ್‌ ಗಾಂಧಿಯವರ ಏಕೈಕ ಗುರಿಯಾಗಿದೆ ಎಂದು ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest Posts

Don't Miss