ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಎನ್ಡಿಎ ಅಧಿಕಾರದ ಚುಕ್ಕಾಣಿ ಹಿಡಿದಿದೆ. 3ನೇ ಬಾರಿಗೆ ಪ್ರಧಾನಿಯಾಗಿ ಮೋದಿಯವರು ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಆದರೆ ನೂತನ ಸರ್ಕಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾವುದೇ ಸಮಯದಲ್ಲಿ ಎನ್ ಡಿಎ ಸರ್ಕಾರ ಪತನವಾಗಬಹುದು ಎಂದಿದ್ದಾರೆ.
ಇಂಗ್ಲೆಂಡ್ನ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಲ್ಲಿ ಆಗುವ ಒಂದು ಸಣ್ಣ ಕಂಪನ ಮೋದಿ ಸರ್ಕಾರವನ್ನೇ ಉರುಳಿಸಬಹುದು. ಪ್ರಸ್ತುತ ಎನ್ ಡಿಎ ಸರ್ಕಾರ ಹೊಂದಿರುವ ಸಂಖ್ಯೆ ಅಷ್ಟು ದುರ್ಬಲವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಬಳಗದೊಳಗೆ ಭಿನ್ನಮತವಿದೆ. ಎನ್ಡಿಎ ಮೈತ್ರಿಯೊಳಗೆ ನಮ್ಮೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿದ್ದಾರೆ. ಮುಖ್ಯವಾಗಿ ಒಂದು ಅಂಗಪಕ್ಷ ಇನ್ನೊಂದು ದಾರಿಗೆ ಹೊರಳಿಕೊಳ್ಳಬಹುದು ಎಂದು ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿದ್ದಾರೆ.
ಆದರೆ ಎನ್ಡಿಎ ಮೈತ್ರಿ ಕೂಟದ ಯಾವ ಪಕ್ಷ ಇಂಡಿಯಾ ಕೂಟದ ಸಂಪರ್ಕದಲ್ಲಿದೆ ಎನ್ನುವುದನ್ನು ರಾಹುಲ್ ಗಾಂಧಿ ಖಚಿತವಾಗಿ ಹೇಳಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನವನ್ನು ಜಯಗೊಳಿಸಿದ್ದರೂ ಮ್ಯಾಜಿಕ್ ನಂಬರ್ ತಲುಪುವಲ್ಲಿ ಎಡವಿದೆ. 2 ಪ್ರಮುಖ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಬಲದೊಂದಿಗೆ ಸರ್ಕಾರ ರಚನೆ ಮಾಡಿರುವ ಎನ್ಡಿಎಗೆ ದೊಸ್ತಿಗಳು ನಿಜಕ್ಕೂ ಕೈ ಕೊಟ್ಟರೆ ಸರ್ಕಾರ ಪತನವಾಗುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.
Rahul Gandhi – ರಾಹುಲ್ ಗಾಂಧಿ ಹೊಸ ಬಾಂಬ್..!
- Advertisement -
- Advertisement -