- Advertisement -
Banglore News :ಮಹಾಘಟ್ ಬಂಧನ್ ಹೆಸರಿನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಇಂದಿನಿಂದ ಅಂದರೆ ಜುಲೈ 17 ರಿಂದ 18 ಅಂದರೆ ನಾಳೆ ವರೆಗು ಕೇಂದ್ರದ ವಿಪಕ್ಷಗಳ ಮೈತ್ರಿ ಮಹಾಕೂಟದ ಸಭೆ ನಡೆಯುವುದು. ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಯುವುದು. ಈ ಸಭೆಗೆ 23 ಪಕ್ಷದ 49ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ. ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಅಗಮಿಸಿದ್ದಾರೆ.
ಅವರನ್ನು ಹೆಚ್‌ಎಎಲ್ ವಿಮಾನದಲ್ಲಿ ಎಐಸಿಸಿ ಅಧಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೂಗುಚ್ಚ ನೀಡಿ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು, ಶುಭ ಹಾರೈಸಿದರು.
- Advertisement -