ರಾಯಚೂರು: ನಿಜಾಮರ ಕಾಲದ ಕಟ್ಟಡಗಳಿದ್ದೂ ದುರಸ್ತಿ ಭಾಗ್ಯ ಕಾಣದೆ ಮಳೆಗಾಲದಲ್ಲಿ ಕಛೇರಿಯ ಕಟ್ಟಡದ ಮೇಲ್ಛಾವಣಿಗಳು ನೆನೆದು ದಿನ ಪೂರ್ತಿ ನೀರು ತಟ ತಟ ನೀರು ಸೋರುತಿರುತ್ತದೆ. ಇಷ್ಟೆಲ್ಲ ಅವ್ಯವಸ್ಥೇ ಇದ್ದರೂ ಕಛೇರಿಗಳು ಮಾತ್ರ ದುರಸ್ತಗಿ ಭಾಗ್ಯ ಕಾಣುತಿಲ್ಲ.
ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಅರಿ ಕಛೇರಿ ಮತ್ತು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಉಪನಿರ್ದೇಶಕರ ಕಛೇರಿ ಮತ್ತು ಡಿಡಿಪಿಯು ಕಛೇರಿಗಳು ಈಗಾಗಲೆ 75 ವರ್ಷ ಪೂರೈಸಿದ್ದು ನಿಜಾಮರ ಕಾಲದ ಕಟ್ಟಡಗಳಾಗಿವೆ ಕಟ್ಟಡದ ಮೇಲ್ಚಾವಣಿಗಲ ಸಿಮೆಂಟ್ ಆಗಾಗ ಕುಸಿದು ಬೀಳುತ್ತಿದ್ದರೆ ಅದರ ಕೆಳಗಡೆಯೇ ಬಂದು ಸಿಬ್ಬಂಧಿಗಳು ಭಯದಿಂದ ಕೆಲಸ ಮಾಡುತಿದ್ದಾರೆ.
ನಿಜಾಮರ ಕಾಲದ ಕಟ್ಟಡಗಳಾಗಿದ್ದು ಇನ್ನು ಕೆಲವು ವರ್ಷಗಳ ಕಾಲ ಬಾಳಿಕೆ ಬರುತ್ತವೆ ಆದರೆ ಆಗಾಗ ದುರಸ್ತೀ ಮತ್ತು ನಿರ್ವಹಣೆ ಮಾಡದ ಕಾರಣ ದಿನೇ ದಿನೇ ಹಾಳಾಗುತ್ತಿವೆ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪರಾತನ ಕಾಲದ ಕಟ್ಟಡಗಳು ಅಳಿವಿನಂಚಿನಲ್ಲಿರುವುದು ತುಂಭಾ ಶೋಚನೀಯ ಸಂಗತಿ. ಇನ್ನು ಮುಂದಾದರೂ ಸಿಬ್ಬಂದಿಗಳ ಜೀವಕ್ಕೆ ಬೆಲೆ ಕೊಟ್ಟು ಅವರು ಕೆಲಸ ಮಾಡಿವ ಜಾಗವನ್ನು ದುರಸ್ತಿಗೊಳಿಸಬೇಕಾಗಿ ವಿನಂತಿ
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ
Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ ಮಹರಾಜ್ ಸ್ವಾಮೀಜಿ