Friday, December 27, 2024

Latest Posts

ಪಾಸಾದವರಿಗೆ 15% ಪ್ರೋತ್ಸಾಹಾಂಕ ನೀಡಲು ಒತ್ತಾಯಿಸಿ ಆಗಸ್ಟ್ 3 ಪ್ರತಿಭಟನೆ

- Advertisement -

ಚಾಮರಾಜನಗರ : ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ದುಡಿಯುವ ವರ್ಗದ ವಿದ್ಯಾರ್ಥಿ ಗಳಿಗೆ ಶೇ.15ರಷ್ಟು ವಿಶೇಷ ಪ್ರೋತ್ಸಾಹಾಂಕ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಆ.3ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಚಾಮರಾಜನಗರದ ಶಿಕ್ಷಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ನಾಗೇಂದ್ರ, ರಾಜ್ಯದ ಉದ್ದಗಲಕ್ಕೂ ವ್ಯಕ್ತವಾದ ಸಾರ್ವಜನಿಕ ಒತ್ತಾಯಗಳ ನಡುವೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದು, 2021ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದೆ, ಇಡೀ ದೇಶದಲ್ಲೇ ಹತ್ತನೆಯ ತರಗತಿಯ ಪರೀಕ್ಷೆಗಳು ರದ್ದಾಗಿದ್ದರೂ, ರಾಜ್ಯ ಸರ್ಕಾರ ಮಾತ್ರ ಲಕ್ಷಾಂತರ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಾರಕವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಿದೆ. ಇದರಿಂದ ಉಂಟಾಗಲಿರುವ ಅಸಮಾನತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊರೊನಾಸಂಕಷ್ಟದಿಂದಾಗಿ ಗ್ರಾಮೀಣ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾಲಿಗೆ ಕಳೆದ ಎರಡು ವರ್ಷಗಳು ನಿಜಕ್ಕೂ ಶೂನ್ಯ ಕಲಿಕಾ ವರ್ಷಗಳೇ ಆಗಿವೆ, ಡಿಜಿಟಲ್ ಶಿಕ್ಷಣ ಗ್ರಾಮೀಣ ಭಾಗದ ಹಾಗೂ ನಗರಗಳ ಬಡ ಕುಟುಂಬಗಳು ಶೇಕಡಾ ಮೂವತ್ತು ಭಾಗ ವಿದ್ಯಾರ್ಥಿಗಳನ್ನೂ ತಲುಪಿಲ್ಲ. ಸ್ಮಾರ್ಟ್‌ಫೋನ್ ದೊರೆಯದ ಬಡ ವಿದ್ಯಾರ್ಥಿನಿಯರನ್ನಂತೂ ಇದು ಶೇ 20ರಷ್ಟು ತಲುಪಿಲ್ಲ. ಶ್ರೀಮಂತ್ರ ಮಕ್ಕಳು ಬಡ ಮಕ್ಕಳ ನಡುವೆ ಹಾಗೂ ಗ್ರಾಮ- ನಗರಗಳ ವಿದ್ಯಾರ್ಥಿಗಳ ನಡುವೆ ಈ ಸಲದ ಎಸ್.ಎಸ್.ಎಲ್.ಸಿ. ಪರೀಕ್ಷೆ  ಕಂದಕ ಸೃಷ್ಟಿಸಿದೆ, ಈ ಕಾರಣದಿಂದ ಎಸ್.ಎಸ್. ಎಲ್ಸಿ ಫಲಿತಾಂಶದಲ್ಲಿ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕಮ್ಮರಡಿ ಶಿಫಾರಸು ಜಾರಿಗೊಳಿಸಲಿ ಎಂದು ಒತ್ತಾಯಿಸಿದ್ದಾರೆ…

ಕಲಿಕೆಯೇ ಸಾಧ್ಯವಾಗದ ಗ್ರಾಮೀಣ ವಿದ್ಯಾರ್ಥಿ ಗಳಿಗೆ ಈ ಸಲದ ಪರೀಕ್ಷೆಯಿಂದಾಗಿ ಆಗಲಿರುವ ಅನ್ಯಾಯಗಳನ್ನು ಸರಿಪಡಿಸಲು ‘ಸಾಂಕ್ರಾಮಿಕ ರೋಗ ಕಾಲದ ವಿಶೇಷ ಪ್ರೋತ್ಸಾಹಾಂಕಗಳನ್ನು (ಪ್ಯಾಂಡೆಮಿಕ್ ಪಿರಿಯಡ್ ಸ್ಪೆಷಲ್ ವೆಜ್) ನೀಡುವ ವ್ಯವಸ್ಥೆ ಜರೂರಾಗಿ ಆಗಬೇಕಿದೆ. ವಿದ್ಯಾರ್ಥಿ ಗಳಿಗೆ ಮುಂದಿನ ಹಂತದ ವಿದ್ಯಾಭ್ಯಾಸದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳೆರಡಲ್ಲೂ ಆದ್ಯತಾ ಪ್ರವೇಶ ವ್ಯವಸ್ಥೆ ಜಾರಿಯಾಗಬೇಕು. ಎಸ್‌ಎಸ್‌ ಎಲ್‌ಸಿ ನಂತರದ ಶೈಕ್ಷಣಿಕ ಆಯ್ಕೆಗಳು, ಶಿಷ್ಯವೇತನ ಪ್ರೋತ್ಸಾಹಧನ ಎಲ್ಲದರಲ್ಲೂ ‘ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾ ಹಾಂಕ ಮತ್ತು (ಪ್ಯಾಂಡೆಮಿಕ್ ಪಿರಿಯಡ್ ವೆಯೇಜ್) ಖಾಸಗಿ ಹಾಗೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಜಾರಿಗೆ ತರುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ದಕ್ಷಿಣ ಪದವೀಧರಕ್ಷೇಥ್ರದ ಮುಂದಿನ  ಅಭ್ಯರ್ಥಿ ಪ್ರಸನ್ನ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ತಾ.ಅಧ್ಯಕ್ಷ ಶಿವಮಲ್ಲು, ಹಸಿರುಸೇನೆ ತಾಲೂಕು ಅಧ್ಯಕ್ಷ ದಿಲೀಪ್, ಹಂಗಳ ಮಾಧು, ಲೋಕೇಶ್, ಇತರರು ಉಪಸ್ಥಿತರಿದ್ದರು..

ಪ್ರಸಾದ್ ಯಡಹುಂಡಿ, ಕರ್ನಾಟಕ ಟಿವಿ, ಚಾಮರಾಜನಗರ

- Advertisement -

Latest Posts

Don't Miss