Sunday, December 22, 2024

Latest Posts

ಬೆಂಗಳೂರಿನಲ್ಲಿ ಮಳೆ ಹಾನಿ: ಸರಿಪಡಿಸಲು ತ್ವರಿತ ಕ್ರಮ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ

- Advertisement -

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಆಗದೆ ಇದ್ದ ಮಳೆ ಈ ಬಾರಿ ಸುರಿಯುತ್ತಿದೆ. ಹೀಗಾಗಿ ತೊಂದರೆ ಆಗಿದೆ. ಇವುಗಳನ್ನು ಪರಿಹರಿಸಲು ಸರಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನ ರಸ್ತೆ ಅವ್ಯವಸ್ಥೆ ಮತ್ತು ಗುಂಡಿಗಳ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ಮತ್ತು ಐಟಿ ಕಂಪನಿಗಳ ಸಂಘಟನೆ ಬೇಸರ ಹೊರಹಾಕಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ಜಗತ್ತಿನ ಎಲ್ಲ ಮಹಾನಗರಗಳಲ್ಲೂ ಇಂತಹ ಸಮಸ್ಯೆಗಳಿವೆ. ಉದ್ಯಮಿಗಳು ಇವುಗಳ ಬಗ್ಗೆ ಗಮನ ಸೆಳೆಯುವುದರಲ್ಲಿ ತಪ್ಪೇನೂ ಇಲ್ಲ. ಅವರ ಬೇಡಿಕೆಯತ್ತ ನಾವು ಗಮನ ಹರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಐಟಿ ಕಂಪನಿಗಳು ಬೆಂಗಳೂರನ್ನು ತೊರೆಯುವ ಬೆದರಿಕೆ ಹಾಕಿರುವುದು ಸರಿಯಲ್ಲ. ತಿಂಗಳ ಹಿಂದೆ ಹೈದರಾಬಾದ್ ನಗರ ಇದೇ ರೀತಿಯ ಮಳೆಯಿಂದ ಮುಳುಗಿ ಹೋಗಿತ್ತು. ಅಲ್ಲಿನ ರಸ್ತೆಗಳ ಮೇಲೆಲ್ಲ ಕಾರುಗಳು ತೇಲುತ್ತಿದ್ದವು. ಇದು ಉದ್ಯಮಿಗಳಿಗೂ ಗೊತ್ತಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನ ಕೆರೆಗಳೆಲ್ಲ ಈಗ ತುಂಬಿವೆ. ಇವುಗಳ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಇದಕ್ಕೆ ವೈಜ್ಞಾನಿಕ ಕ್ರಮದಲ್ಲಿ ಗೇಟ್ ಅಳವಡಿಸಲಾಗುವುದು ಎಂದು ಸಚಿವರು ನುಡಿದರು.

- Advertisement -

Latest Posts

Don't Miss