National News : ಗುಜರಾತ್‌ನಲ್ಲಿ ಮಂಗಳವಾರ ಭಾರೀ ಮಳೆಯಾಗಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ರಾಜ್‌ಕೋಟ್, ಸೂರತ್ ಮತ್ತು ಗಿರ್ ಸೋಮನಾಥ್ ಜಿಲ್ಲೆಗಳು ಜಲಾವೃತವಾಗಿದ್ದು, ಕಳೆದ ಕೆಲವು ಗಂಟೆಗಳಲ್ಲಿ ರಾಜ್ಯದಲ್ಲಿ 300 ಮಿಮೀ ಮಳೆ ಸುರಿದಿದ್ದು, 70 ಜನರನ್ನು ಸ್ಥಳಾಂತರಿಸಲಾಗಿದೆ.
ಗುಜರಾತ್‌ನ ಪ್ರವಾಹ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಅಂದರೆ ಮಳೆ ನೀರಿನಲ್ಲಿ ಮುಳುಗಿದ ವಾಹನಗಳು ಸಂಪೂರ್ಣ ಆಟಿಕೆಯಂತೆ ಕಾಣಿಸುತ್ತಿವೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಪ್ರವಾಹದಿಂದಾಗಿ ಅಂಗಡಿ ಮುಗ್ಗಟ್ಟು ಮುಚ್ಚಿವೆ.
ರಾಜ್‌ಕೋಟ್ ಜಿಲ್ಲೆಯ ಧೋರಾಜಿ ನಗರದಲ್ಲಿ ನಿರಂತರ ಮಳೆಯಿಂದಾಗಿ ತೀವ್ರ ಜಲಾವೃತವಾಗಿದೆ. ಕೆಲವು ಗಂಟೆಗಳಲ್ಲಿ ಸುಮಾರು 300 ಮಿಮೀ ಮಳೆ ದಾಖಲಾಗಿದೆ. 70 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿವೆ.
Showcauses letter: ನೀವೇಕೆ ತಡವಾಗಿ ಬಂದಿದ್ದೀರಾ ? ಎಂದು ಹಿರಿಯ ಅಧಿಕಾರಿಗೆ ಪ್ರಶ್ನೆ ಮಾಡಿದ ಕಿರಿಯ ಅಧಿಕಾರಿ
Rahul Gandhi : ರಾಹುಲ್ ಗಾಂಧಿ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
Narendra Modi : “NDA ಉದ್ದೇಶ ಭಾರತದ ಪ್ರತಿ ವ್ಯಕ್ತಿಯನ್ನು ಸ್ವಾವಲಂಬಿಯಾಗಿಸುವುದು” : ನಮೋ