- Advertisement -
Kalburgi News : ಒಂದೆಡೆ ಬೆಳಗಾವಿಯಲ್ಲಿ ಮಳೆಯಿಂದಾಗಿ ಜನ ಜೀವನವೇ ಅಸ್ತವ್ಯಸ್ತವಾಗಿದ್ದು. ಕಲಬುರುಗಿಯಲ್ಲೂ ಮಳೆ ತಾಂಡವವಾಡುತ್ತಿದೆ. ಆದರೆ ಇಲ್ಲಿ ಜಲಪಾತವೊಂದು ಮೈದುಂಬಿ ಹರಿದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆ ಆಗುತ್ತಿದೆ. ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ಎತ್ತಪೋತ್ತಾ ಕಿರು ಜಲಪಾತ ಮೈಬುಂದಿ ಹರಿಯುತ್ತಿದೆ.
ಕಳೆದ ಕೆಲ ತಿಂಗಳಿಂದ ಮಳೆ ಇಲ್ಲದೆ, ಎತ್ತಪೋತ್ತಾ ಕಿರು ಜಲಪಾತ ಬರಿದಾಗಿತ್ತು. ಆದರೆ ಸದ್ಯ ಕುಂಚಾವರಂ ಭಾಗದಲ್ಲಿ ಭಾರೀ ಮಳೆಯಿಂದ ಎತ್ತಪೋತ್ತಾ ಕಿರು ಜಲಪಾತ ತುಂಬಿ ಹರಿಯುತ್ತಿದೆ. ಜನರು ಜಲಪಾತ ನೋಡಲು ಮುಗಿಬಿಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Police : ಪೊಲೀಸರಿಗೆ ಇಲ್ಲ ರಕ್ಷಣೆ…! ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ..?!
- Advertisement -