Manglore News : ಕರಾವಳಿ ಭಾಗದಲ್ಲಿ ಮಳೆ ಕಡಿಮೆಯಾದರೂ ಕಡಲಿನ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ. ಅನೇಕ ಕಡೆಗಳಲ್ಲಿ ನಿರ್ಬಂಧ ಇನ್ನೂ ಹೇರಲಾಗಿದೆ. ಎಂಟು ಬೀಚ್ ಗಳಿಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ.
ನಿರ್ಬಂಧ ಇದ್ದರೂ ಪ್ರವಾಸಿಗರು ಪಣಂಬೂರು ಬೀಚ್ ಸಮುದ್ರ ತೀರ ಕಡೆ ಧಾವಿಸುತ್ತಿದ್ದರೆ. ಎಚ್ಚರಿಕೆಯ ಸೂಚನೆ ಇದ್ದರು ಪ್ರವಾಸಿಗರು ಕಡಲಿಗೆ ಬಂದು ಇಳಿಯುತ್ತಿರುವುದು , ಭದ್ರತಾ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ 8 ಬೀಚ್ ಗಳಲ್ಲಿ 24ಮಂದಿ ಹೋಂ ಗಾರ್ಡ್ಸ್ ನೇಮಕ ಮಾಡಲಾಗಿದೆ. ಬೀಚ್‌ಗೆ ಅಡ್ಡಲಾಗಿ ಹಗ್ಗ ಕಟ್ಟಿದ್ದರೂ ಸಹ ಪ್ರವಾಸಿಗರು ಅದನ್ನು ದಾಟಿ ಬೀಚ್ ಆಗಮಿಸುತ್ತಿದ್ದಾರೆ. ಹೀಗಾಗಿ ಲೈಫ್ ಗಾರ್ಡ್ ಸಿಬ್ಬಂದಿ ಸೈರನ್ ಹಾಕಿ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಇನ್ನೊಂದಡೆ ಪೊಲೀಸರು ಬಂದ ಪ್ರವಾಸಿಗರನ್ನು ವಾಪಾಸು ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್, ಸೆಲ್ಫಿ ತೆಗೆಯದಂತೆಯೂ ನಿರ್ಬಂಧಿಸಲಾಗಿದೆ ಎನ್ನಲಾಗಿದೆ.
Transgender : ಮಂಗಳಮುಖಿಯರಿಂದ ಸಾರ್ವಜನಿಕರಿಗೆ ಕಿರುಕುಳ : ಪ್ರಕರಣ ದಾಖಲು




