ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ಮತ್ತೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ದಕ್ಷಿಣದ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ನ.10ರವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 11ರಿಂದ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ ಮತ್ತು ಆಂಧ್ರಪ್ರದೇಶದಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆ ಆಗುವ ಸಂಭವವಿದೆ,
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ ನಂತಹ ಮುಂತಾದ ಹಿಮಾಲಯ ಶ್ರೇಣಿಗಳ ಪ್ರದೇಶಗಳಲ್ಲಿ ಹಿಮಪಾವಾಗುವ ಸಾಧ್ಯತೆಯಿದೆ. ಉತ್ತರ ಪಂಜಾಬ್ ಮತ್ತು ಉತ್ತರ ಹರಿಯಾಣದಲ್ಲಿ ನವೆಂಬರ್ 9-10 ಮತ್ತು ಉತ್ತರ ರಾಜಾಸ್ಥಾನದಲ್ಲಿ ನವೆಂಬರ್ 8 ರಂದು ತುಂತುರು ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 11 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನಲ್ಲಿ ಭಾರಿ ಮಳೆಯಾಗಲಿದೆ. ನವೆಂಬರ್ 8ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ.
ಚೆನ್ನೈ – ಮೈಸೂರು ನಡುವಿನ ಪ್ರಾಯೋಗಿಕ ‘ವಂದೇ ಭಾರತ್’ ರೈಲಿನ ಸಂಚಾರ ಪ್ರಾರಂಭ