Tuesday, October 14, 2025

Latest Posts

ಅಕ್ಟೋಬರ್‌ಗೂ ವರುಣಾಘಾತ : 8 ಜಿಲ್ಲೆ ಸ್ಥಿತಿ ಅಯೋಮಯ

- Advertisement -

ರಾಜ್ಯಕ್ಕೆ ಮತ್ತೆ ಮಳೆರಾಯನ ಆಘಾತ ಎದುರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇಂದಿನಿಂದ ಮುಂದಿನ 2 ದಿನಗಳ ಕಾಲ ಉತ್ತರ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 1ರಿಂದ ಮಳೆ ಮತ್ತಷ್ಟು ಚುರುಕಾಗಲಿದೆ. ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಕೂಡ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇತರ ಹಲವಾರು ಜಿಲ್ಲೆಗಳಾದ ಧಾರವಾಡ, ಹಾವೇರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಸಿಂದಗಿ, ಹುಣಸಗಿ, ಕಕ್ಕೇರಿ, ಕೆಂಭಾವಿ, ಚಿಂಚೋಳಿ, ಔರಾದ್, ಭಾಲ್ಕಿ, ದೇವರಹಿಪ್ಪರಗಿ, ಹುಮ್ನಾಬಾದ್, ಇಂಡಿ, ನೆಲೋಗಿ, ಸೈದಾಪುರ, ಭಾಗಮಂಡಲ, ಬೀದರ್, ಗೇರುಸೊಪ್ಪ, ಗುರುಮಿಟ್ಕಲ್, ಕುಣಿಗಲ್, ಲೋಂಡಾ, ಮಾಗಡಿ, ಮಾನ್ವಿ, ನಾಪೋಕ್ಲು, ಪುತ್ತೂರು, ಸೇಡಂ, ಆಗುಂಬೆ, ಅಜ್ಜಂಪುರ, ಬಾದಾಮಿ, ಬಾಳೆಹೊನ್ನೂರು, ಬಂಟವಾಳ, ಭದ್ರಾವತಿ, ಹರಪನಹಳ್ಳಿ, ಜಯಪುರ, ಕುಂದಾಪುರ, ಮುದ್ದೇಬಿಹಾಳ, ನಾರಾಯಣಪುರ, ಶಾಹಪುರ, ಶೃಂಗೇರಿ, ಝಲ್ಕಿ ಸೇರಿದಂತೆ ಅನೇಕ ಕಡೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿದಿದ್ದು, ಇಂದು ಬೆಂಗಳೂರಿನ ಎಚ್‌ಎಎಲ್ ವೀಕ್ಷಣಾಲಯದಲ್ಲಿ ಗರಿಷ್ಠ 28.2 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹೊನ್ನಾವರದಲ್ಲಿ 30.1, ಕಾರವಾರದಲ್ಲಿ 31.2, ಮಂಗಳೂರಿನಲ್ಲಿ 29, ಬೆಳಗಾವಿ 28.6, ಬೀದರ್ 24.5, ವಿಜಯಪುರ 30.5, ಧಾರವಾಡ 28.6, ಗದಗ 29.4, ಕಲಬುರಗಿ 31.8, ಹಾವೇರಿ 28.4, ಕೊಪ್ಪಳ 30.5 ಹಾಗೂ ರಾಯಚೂರಿನಲ್ಲಿ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಒಟ್ಟಾರೆ, ರಾಜ್ಯದಾದ್ಯಂತ ಮಳೆಯ ಅಬ್ಬರ ಮುಂದುವರಿಯಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss