Monday, December 23, 2024

Latest Posts

Rain fall: ಮಳೆಯಿಂದಾಗಿ ಹಳ್ಳಗಳು ಭರ್ತಿ; ಸೇತುವೆ ಮುಳುಗಡೆ ..!

- Advertisement -

ಹುಬ್ಬಳ್ಳಿ: ರಾಜ್ಯದಲ್ಲಿ ನಿನ್ನೆ ಸುರಿದ ಧಾರಕಾರ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥವಾಗಿದೆ. ಅದೇ ರೀತಿ ಹುಬ್ಬಳ್ಳಿ ಜಿಲ್ಲೆಯಲ್ಲಿಯೂ ಸಹ ಧಾರಾಕಾರ ಮಳೆಯಾಗಿದ್ದು ರಸ್ತೆಯಲ್ಲಿರುವ ಹಳ್ಳದ ಸೇತುವೆಗಳು ಮುಳುಗಡೆಯಾದ ಕಾರಣ ಸಾರ್ವಜನಿಕರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡಿದರು.

ಹುಬ್ಬಳ್ಳಿ ಜಿಲ್ಲೆಯ ಸಂಶಿ ಮತ್ತು ಚಾಲಕಬ್ಬಿ ಗ್ರಾಮಗಳ ನಡುವೆ ಹಳ್ಳವಿದ್ದು ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಸಂಪೂರ್ಣ ಜಲಾವೃತಗೊಂಡ ಕಾರಣ ಚಾಲಕಬ್ಬಿ ಗ್ರಾಮದ ಜನರು ಸಂಶಿ ಗ್ರಾಮದ ಹಳ್ಳದ ದಂಡೆಯಲ್ಲಿ ಸಿಲುಕಿಕೊಂಡರು. ಸಾಯಂಕಾಲದ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆ ಮುಗಿಸಿ ಮನೆಗೆ ಬಸ್ ನಲ್ಲಿ ತೆರಳುತ್ತಿದ್ದರು ಆದರೆ ಸೇತುವೆ ಮುಳುಗಡೆಯಾದ ಕಾರಣ ಬಸ್ ಗ್ರಾಮಕ್ಕೆ ತಲುಪಲಿಲ್ಲ.

ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಊರಿಗೆ ತೆರಳಲು ಪರದಾಡಿದರು. ನಂತರ ಸ್ಥಳಕ್ಕೆ ಕುಂದಗೋಳ ಠಾಣಾ ಇನ್ಸ್ಪೆಕ್ಟರ್ ಶಿವಾನಂದ ಭೇಟಿ ನೀಡಿ ಪರಿಶೀಲಿಸಿದರು.

Elephant: ಆನೆಯ ಪ್ರತಿ ದಾಳಿಗೆ ಶೂಟರ್ ವೆಂಕಟೇಶ್ ಸಾವು..!

DK shivakumar: ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಲಿ..!

Forest: ಅರಣ್ಯ ಇಲಾಖೆ ಶಾರ್ಪ್ ಶೂಟರ್ ಮೇಲೆ ಕಾಡಾನೆ ದಾಳಿ..!

- Advertisement -

Latest Posts

Don't Miss