Monday, August 4, 2025

Latest Posts

ಶ್ರಾವಣದಲ್ಲಿ ‘ಮಳೆಯಾರ್ಭಟ’ – 7 ದಿನಗಳವರೆಗೆ ಅಲರ್ಟ್!

- Advertisement -

ಕರ್ನಾಟಕದಾದ್ಯಂತ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಶ್ರಾವಣ ಸಂಭ್ರಮದ ನಡುವೆ ಎಲ್ಲೆಲ್ಲೂ ಮುಂಗಾರು ಮಳೆ ಅಬ್ಬರ ಜೋರಾಗಿದೆ. ರಾಜ್ಯದ ಹಲವೆಡೆಗಳಲ್ಲಿ ಈಗ ಭಾರೀ ಭರ್ಜರಿ ಮುಂಗಾರು ಮಳೆ ಸುರಿಯುತ್ತಿದೆ. ಈ ಮಳೆ ಜನ ಜೀವನದ ಮೇಲೆ ನೇರ ಪರಿಣಾಮ ಬೀರಿದೆ. ಮಳೆ ಯಾವಾಗ ನಿಲ್ಲುತ್ತೆ? ಅನ್ನೋ ಪ್ರಶ್ನೆ ಮನೆಮಾತಾಗಿದೆ.

ಉಡುಪಿಯಿಂದ ಉತ್ತರ ಕನ್ನಡದವರೆಗೆ, ದಕ್ಷಿಣ ಕನ್ನಡದಿಂದ ಕೊಡಗು, ಚಿಕ್ಕಮಗಳೂರುವರೆಗೆ — ಎಲ್ಲೆಲ್ಲೂ ತೀವ್ರ ಮಳೆಯ ಅಬ್ಬರ ಕಾಣುತ್ತಿದೆ. ಹವಾಮಾನ ಇಲಾಖೆ ಇದೀಗ ಮುಂದಿನ 4 ರಿಂದ 7 ದಿನಗಳವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಲ್ಲಿ Orange Alert ಘೋಷಣೆಯಾಗಿದ್ದು, ಮಳೆ ಇನ್ನೂ ಹೆಚ್ಚಾಗಲಿದೆ ಎಂಬ ಆತಂಕ ಮನೆಮಾಡಿದೆ.

ಇದರಿಂದಾಗಿ ಕೆಲವು ಶಾಲಾ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕೂಡ ರಾತ್ರಿಯಿಂದಲೇ ಮಳೆ ಶುರುವಾಗಿದ್ದು, ಈಗ ಮೋಡಕವಿದ ವಾತಾವರಣವಿದ್ದು, ಯಾವಾಗ ಬೇಕಾದರೂ ಮಳೆ ಬರಬಹುದು ಎನ್ನುವಂತಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ,ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ರಾಮನಗರ, ಮೈಸೂರು, ಮಂಡ್ಯ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ನಗರ,ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನು ಹೊರತುಪಡಿಸಿ ಕೂಡ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss