Friday, February 7, 2025

Latest Posts

Rainy season: ಒಂದೇ ಸೀಜನ್ ನಲ್ಲಿ ಎರಡೆರಡು ಅನುಭವ: ರೈತ ಸಮುದಾಯಕ್ಕೆ ಅತಿವೃಷ್ಟಿ ಅನಾವೃಷ್ಟಿ..!

- Advertisement -

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ಒಂದೇ ವರ್ಷದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಅನುಭವವಾಗಿದೆ.‌ ಬಿತ್ತನೆ ಮಾಡಬೇಕಾದ ಸಮಯ ಜೂನ್‌ನಲ್ಲಿ ಮಳೆಯ ದರ್ಶನವೇ ಆಗಲಿಲ್ಲ, ಪರಿಣಾಮ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಲಗಳಲ್ಲಿ ಬಿತ್ತನೆಯಾಯಿತು. ಇನ್ನು, ಜುಲೈ ಮಧ್ಯಭಾಗದಲ್ಲಿ ಆರಂಭವಾದ ವರ್ಷಧಾರೆ ಎಡೆಬಿಡದೆ ಸುರಿದು ತಲ್ಲಣ ಸೃಷ್ಟಿಸಿದೆ. ಇದು ಧಾರವಾಡ ಜಿಲ್ಲೆಯ ಈ ವರ್ಷದ ಮುಂಗಾರು ಹಂಗಾಮಿನ ಸ್ಥಿತಿ.

ಹೌದು..ಕಳೆದ ವರ್ಷ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ‌ ರೈತರು ಬೆಳೆಗಳನ್ನು ಕಳೆದುಕೊಂಡರೆ, ಈ ಬಾರಿ ಎರಡೇ ತಿಂಗಳಲ್ಲಿ ಬರ, ನೆರೆ ಎರಡನ್ನೂ ಅನುಭವಿಸುವಂತಾಗಿದೆ. ಜೂನ್‌ನಲ್ಲಿ ಮಳೆ ಇಲ್ಲದೆ ಒಣ ನೆಲದಲ್ಲೇ ಅನೇಕ ರೈತರು ಬಿತ್ತನೆ ಮಾಡಿದರು. ಆ ಸಮಯದಲ್ಲಿ ವರುಣ ಕೃಪೆ ತೋರಲಿಲ್ಲ. ಬಿತ್ತನೆ ಮಾಡಿದ ಬೀಜ ಉಳಿಸಿಕೊಳ್ಳಲು ಕೃಷಿಕರು ಟ್ಯಾಂಕರ್‌ಗಳಲ್ಲಿ ನೀರು ತಂದು ಹಾಕಿ ಒಂದಿಷ್ಟು ಬೆಳೆ ಉಸಿರಾಡುವಂತೆ ಮಾಡಿದರು.

ಜೂನ್ ತಿಂಗಳು ಪೂರ್ತಿ ಮಳೆ ಹೋಗಿದ್ದರಿಂದ ಸರ್ಕಾರ ಕೂಡ ಬರಗಾಲ ಘೋಷಣೆ ಮಾಡುವ ಆಲೋಚನೆಯಲ್ಲಿತ್ತು. ಅಷ್ಟರಲ್ಲಿ ಮಳೆ ಶುರುವಾಯಿತು. ಆದರೆ, ಪೂರ್ತಿ ಪ್ರಮಾಣದಲ್ಲಿ ಬಿತ್ತನೆಯಾಗದೆ ಎಲ್ಲೆಡೆ ಕಪ್ಪು ಹೊಲಗಳು ಕಾಣುತ್ತಿವೆ. ಇದೀಗ ಮಳೆಯಾದರೂ ಫಸಲು ತೆಗೆಯುವ ಸ್ಥಿತಿಯಲ್ಲಿ ರೈತರು ಇಲ್ಲ.

ಇನ್ನು ಜುಲೈನಲ್ಲಿ ಅತಿ ಮಳೆಯಿಂದ ಕೆಲವೆಡೆ ಬಿತ್ತನೆ ಮಾಡಲಾದ ಹೆಸರು, ಶೇಂಗಾ ಬೆಳೆಗಳು ನೀರಲ್ಲಿ ನಿಂತವು. ಈಗ ಅವುಗಳ ಬೇರು ಕೊಳೆತು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದೇ ಮಳೆ ಒಂದು ತಿಂಗಳು ಮೊದಲು ಬಂದಿದ್ದರೆ ಬಿತ್ತನೆಯಾಗಿ ಭರಪೂರ ಫಸಲು ಬರುತ್ತಿತ್ತು ಎಂದು ರೈತ ಸಮುದಾಯ ಹೇಳುತ್ತಿದೆ.

MLC Pradeep Shetter : ಚಿಗರಿ ಬಸ್ಸಿನಲ್ಲಿ ಸುತ್ತಾಡಿ ಪ್ರಯಾಣಿಕರಿಂದ ಸಮಸ್ಯೆ ಆಲಿಸಿದ ಪ್ರದೀಪ್ ಶೆಟ್ಟರ್

Media Pass: ಪತ್ರಕರ್ತರ ಪರ್ಸ್ ಮರಳಿಸಿ ಮಾನವೀಯತೆ ತೋರಿದ ವಿದ್ಯಾರ್ಥಿಗಳು

Siddaramaiah : ಉದ್ಯಮ ಜಗತ್ತಿನ ಬೇಡಿಕೆಗೆ ತಕ್ಕಂತೆ ಕೌಶಲ್ಯ ವೃದ್ಧಿಗೆ ಸರ್ಕಾರ ಬದ್ದ: ಮುಖ್ಯಮಂತ್ರಿ ಸಿದ್ದರಾಮಯ್ಯ

- Advertisement -

Latest Posts

Don't Miss