Film News : ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂ ಹಾಗೂ ಸರಳ, ಸಜ್ಜನ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ತನ್ನತ್ತ ಸೆಳೆಯೋದೆ ತಲೈವಾ ಸ್ಪೆಷಾಲಿಟಿ ಇದೀಗ ತಮ್ಮ ನಿಜ ಜೀವನದಲ್ಲಿ ಮಾಡಿದಂತಹ ವಿಭಿನ್ನ ಸ್ಟೈಲ್ ಗೆ ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸ್ಟೈಲ್ ನಿಂದಲೇ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಎಷ್ಟೇ ಎತ್ತರಕ್ಕೆ ಏರಿದರೂ ತಲೈವಾ ಹಳೆಯದನ್ನು ಮರೆತ್ತಿಲ್ಲ. ‘ಜೈಲರ್’ ಸಿನಿಮಾದಿಂದ ಮತ್ತೊಮ್ಮೆ ರಜನಿಕಾಂತ್ ತಮ್ಮ ತಾಕತ್ತು ಸಾಬೀತು ಮಾಡಿ ತೋರಿಸಿದ್ದಾರೆ. ವಯಸ್ಸು 70 ದಾಟಿದರೂ ಸೂಪರ್ ಸ್ಟಾರ್ ಸ್ಟೈಲ್‌ಗೆ ಇನ್ನು 20ರ ಹರೆಯ.
ನೆಲ್ಸನ್ ನಿರ್ದೇಶನದ ‘ಜೈಲರ್’ ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಂಭಾವನೆ, ಲಾಭದಲ್ಲಿ ಪಾಲು ಸೇರಿದಂತೆ ಈ ಚಿತ್ರದಿಂದ ಒಟ್ಟಾರೆಯಾಗಿ ತಲೈವಾಗೆ 200 ಕೋಟಿ ರೂ. ವರಮಾನ ಬಂದಿದೆ ಎನ್ನಲಾಗುತ್ತಿದೆ. ಸದ್ಯ ಮತ್ತೆರಡು ಸಿನಿಮಾಗಳಲ್ಲಿ ರಜನಿಕಾಂತ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಲೈವಾ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ದಶಕಗಳ ಹಿಂದೆ 2 ವರ್ಷಗಳ ಕಾಲ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಆಗ ಜಯನಗರ ಬಸ್ ಡಿಪೋದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಹಾಗಾಗಿ ಬೆಂಗಳೂರಿಗೆ ಬಂದ ಕೂಡಲೇ ಅಲ್ಲಿಗೆ ತೆರಳಿ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದರು.
ಅದಕ್ಕೂ ಮುನ್ನ ಚಾಮರಾಜಪೇಟೆಯ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ರಾಯರ ಪರಮಭಕ್ತರಾದ ರಜನಿಕಾಂತ್ ಚಿಕ್ಕಂದಿನಿಂದಲೂ ಆ ಮಠಕ್ಕೆ ಹೋಗುತ್ತಿದ್ದರು. ರಾಯರ ಕೃಪೆಯಿಂದಲೇ ತಮಗೆ ಯಶಸ್ಸು ಸಿಕ್ಕಿದಾಗಿ ನಂಬುತ್ತಾರೆ. ಮಠದಲ್ಲಿ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದರು. ರಜನಿಕಾಂತ್ ಅಂದು ಪೂಜೆ ವೇಳೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ಹಾಕಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ತೆರೆಮೇಲೆ ಮಾತ್ರವಲ್ಲ ಕೆಲವೊಮ್ಮೆ ನಿಜಜೀವನದಲ್ಲೂ ಆ ಸ್ಟೈಲ್ ಮೂಲಕ ರಜನಿಕಾಂತ್ ಎಲ್ಲರನ್ನು ಬೆರಗಾಗಿಸುತ್ತಾರೆ. ಅಂದು ಮಠದಲ್ಲಿ ಮಂಗಳಾರತಿ ತಟ್ಟೆಗೆ ತಲೈವಾ ದಕ್ಷಿಣೆ ಹಾಕಿದ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಂದು ತಲೈವಾ ತಮ್ಮ ಮಡಚಿದ ಶರ್ಟ್ ಕೈಯಿಂದ ಹಣ ತೆಗೆದು ತಟ್ಟೆಗೆ ಹಾಕಿದ್ದರು. ಈಗ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬಿಳಿ ಬಣ್ಣದ ಉದ್ದ ಕೈ ಅಂಗಿ ಹಾಗೈ ಬಿಳಿ ಪಂಚೆ ತೊಟ್ಟು ರಜನಿಕಾಂತ್ ಬೆಂಗಳೂರಿಗೆ ಬಂದಿದ್ದರು. ಶರ್ಟ್ ತೋಳನ್ನು ಮುಂದೆ ಕೊಂಚ ಮಡಚಿದ್ದರು. ಅದರಲ್ಲಿ ಹಣ ಇಟ್ಟುಕೊಂಡಿದ್ದರು. ಪೂಜಾರಿ ಮಂಗಳಾರತಿ ತಟ್ಟೆ ಮುಂದೆ ಹಿಡಿದಾಗ ಅದರಿಂದ ಹಣ ತೆಗೆದು ದಕ್ಷಿಣೆ ಹಾಕಿದ್ದರು. ರಜನಿಕಾಂತ್ ಮಾತ್ರ ಇಂತಹದನ್ನೆಲ್ಲಾ ಮಾಡಬಲ್ಲರು ಎಂದು ಅಭಿಮಾನಿಗಳು ಈ ವಿಡಿಯೋ ವೈರಲ್ ಮಾಡಿದ್ದಾರೆ.
“ಟೆಕ್ನೋ-ಸಾಂಸ್ಕೃತಿಕ ಉತ್ಸವ -2023 ರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡುವಾಳು ಸಚ್ಚಿದಾನಂದ್ ಭಾಗಿ
Film news”ಕ್ರೇಜಿ ಕೀರ್ತಿ” ಚಿತ್ರದ ಟ್ರೇಲರ್ ಬಿಡುಗಡೆ : ಯುವಕರಿಗೊಂದು ಸ್ಪೆಷಲ್ ಸಿನಿಮಾ

