ಕ್ರಾಂತಿ ಬಗ್ಗೆ ರಾಜಣ್ಣ ಹೊಸ ಬಾಂಬ್‌ – DK ಸಿಎಂ ಸ್ಥಾನದ ಬಗ್ಗೆ ಹಿಂಗ್ಯಾಕಂದ್ರು?

ರಾಜ್ಯ ರಾಜಕೀಯದಲ್ಲಿ ನವೆಂಬರ್‌ ಕ್ರಾಂತಿಯ ಬಗ್ಗೆ ಬಾಂಬ್‌ ಸಿಡಿಸಿದ್ದ ಮಾಜಿ ಸಚಿವ ಕೆಎನ್‌ ರಾಜಣ್ಣ ಈಗ ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗುವ ಪರಿಸ್ಥಿತಿ ಉದ್ಭವವಾಗುವುದಿಲ್ಲ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌ ಬಳಿಕ ಹೈಕಮಾಂಡ್‌ ಆದೇಶದ ಅನ್ವಯ ಕುರ್ಚಿ ಕಿತ್ತಾಟದ ಹೇಳಿಕೆಗಳು ಬಂದ್‌ ಆಗಿದ್ದವು. ಆದರೆ ಸಿಎಂ ಪುತ್ರ ಯತೀಂದ್ರ ಹೇಳಿಕೆಯ ನಂತರ ರಾಜಣ್ಣ ಡಿಕೆಶಿ ಮುಖ್ಯಮಂತ್ರಿ ಆಗುವ ಪರಿಸ್ಥಿತಿಯೇ ಉದ್ಭವವಾಗುವುದಿಲ್ಲ ಎಂದು ಖಡಕ್‌ ಆಗಿಯೇ ತಿಳಿಸಿದ್ದಾರೆ.

ಡಿಕೆಶಿ ಸಿಎಂ ಆದರೆ ನಾನು ಸಂಪುಟ ಸೇರುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಅವರು ಸಿಎಂ ಆದಾಗ ಆ ಪ್ರಶ್ನೆ ಏಳುತ್ತದೆ. ನಾನು ಕಾಂಗ್ರೆಸ್‌ನಲ್ಲೇ ಇದ್ದವನು. ಪಕ್ಷ ನನಗೆ ಏನು ಮಾಡಿಲ್ಲ ಆದರೆ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂದು ಯಾರ ಹೆಸರನ್ನು ಉಲ್ಲೇಖಿಸದೇ ದೂರಿದರು.

ಸಕ್ರಿಯೆ ರಾಜಕಾರಣದಲ್ಲಿ ಇರುತ್ತೇನೆ ಅಥವಾ ಪಕ್ಷ ಬೀಡುತ್ತೇನೆ ಎಂದು ಹೇಳಿದ್ದು ಎಂದು ರಾಜಣ್ಣ ಹೇಳಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಅವರ ವೈಯುಕ್ತಿಕ‌ ಹೇಳಿಕೆಯಾಗಿದೆ. ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ಹೆದರಿಸುವಂತಹದ್ದು, ಹೈಕಮಾಂಡ್ ಸಿದ್ದರಾಮಯ್ಯನವರನ್ನು ಕೈ ಬಿಡುವುದಾಗಲಿ ಇಲ್ಲ ಎಂದು ಹೇಳಿದರು.

ಇನ್ನು ಪರಮೇಶ್ವರ್‌ ಸಿಎಂ ಆಗಲಿ ಎನ್ನುವ ವಿಚಾರಕ್ಕೆ ಸಂಬಂದಪಟ್ಟಂತೆ ಪ್ರತಿಕ್ರಿಯಿಸಿದ ರಾಜಣ್ಣ, ಪರಮೇಶ್ವರ್ ಅವರನ್ನ ದಲಿತರು ಎನ್ನುವ ಕಾರಣಕ್ಕೆ ಪರಿಗಣಿಸಬೇಕಿಲ್ಲ. 2013 ರಲ್ಲಿ ಅಧ್ಯಕ್ಷರಾಗಿ ಪರಮೇಶ್ವರ್ ಪಕ್ಷ ಗೆಲ್ಲಿಸಿದ್ದಾರೆ. ಅವರ ಕೊಡುಗೆಯೂ ಅಷ್ಟೇ ಇದೆ ಎಂದರು. ರಾಜಣ್ಣ ಯಾವ ಪಕ್ಷದಲ್ಲಿದ್ದಾರೆ ಎನ್ನೊದನ್ನ ಹೇಳಲಿ ಎಂಬ ಶಾಸಕ ಬಾಲಕೃಷ್ಣ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾವನಿಂದಲೂ ಕಲಿಯಬೇಕಾಗಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ 15 ವರ್ಷದಿಂದ ಇದ್ದೇನೆ. ಬಾಲೀಷ ಹೇಳಿಕೆ ಏನ್ ಬೇಕಿದ್ರು ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author