www.karnatakatv.net :ಜೈಪುರ :ಬಡ ರೈತನ ಮಕ್ಕಳು ಮಾಡಿರುವ ಸಾಧನೆ ಮುಗಿಲು ಮುಟ್ಟುವಂತೆ ಇದೆ. ರಾಜಸ್ಥಾನದ ಹನುಮಾನಘರ್ ನಗರದ ಐವರು ಹೆಣ್ಣು ಮಕ್ಕಳು ಪ್ರತಿಷ್ಠಿತ ರಾಜಸ್ಥಾನ ಆಡಳಿತಾತ್ಮಕ ಸೇವೆ ಹುದ್ದೆಗೆ ಆಯ್ಕೆಯಾಗಿದ್ದಾರೆ. 2018 ರ ಆರ್ ಎ ಎಸ್ ಪರೀಕ್ಷಾ ಫಲಿತಾಂಶವು ಜು.13 ರಂದು ಪ್ರಕಟವಾಗಿದ್ದು. ಅದರಲ್ಲಿ ರೈತ ಸಹದೇವ ಸಹರನ್ ಪುತ್ರಿಯರಾದ ಅಂಶು, ರೀತು ಮತ್ತು ಸುಮನ್ ತೇರ್ಗಡೆಯಾಗಿದ್ದಾರೆ, ಅದಕ್ಕೂ ಮುಂಚೆ ನಡೆದ ಆರ್ ಎ ಎಸ್ ಪರೀಕ್ಷೆಯಲ್ಲಿ ಅವರ ಹೀರಿಯ ಸಹೊದರಿಯಾದ ರೋಮ ಮತ್ತು ಮಂಜು ತೇರ್ಗಡೆಯಾಗಿ ಸರ್ಕಾರ ಹುದ್ದೆಯನ್ನು ಅಲಂಕರಿಸಿದ್ದರು. ವಿಶೆಷ ವೆಂದರೆ ಇವರು ಯಾರು ಐದನೇ ತರಗತಿಯ ನಂತರ ಶಾಲೆಗೆ ಹೋಗಿಲ್ಲ ಮನೆಯಲ್ಲೇ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಮಾಡಿದ್ದಾರೆ, ಒಬ್ಬರಿಗೊಬ್ಬರು ಸಹಾಯವನ್ನು ಮಾಡುತ್ತಾ ಮನೆಯಲ್ಲೆ ಕುಳಿತು ವಿದ್ಯಾಭ್ಯಾಸವನ್ನು ಮಾಡಿದ್ದಾರೆ ಹಾಗೆ ಗ್ರಾಮಸ್ಥರು ಕೂಡಾ ಇವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.