Saturday, April 19, 2025

Latest Posts

ರಾಜವೀರ ಮದಕರಿ ಸಿನಿಮಾ ಶೂಟಿಂಗ್ ಯಾವಾಗ..?

- Advertisement -

www.karnatakatv.net : ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜವೀರ ಮದಕರಿ ಸಿನಿಮಾದಲ್ಲಿ ನಟಿಸಲಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ.. ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಇದೀಗ ಭರದಿಂದ ಸಾಗಿವೆ.. ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರದ ಕಥೆಗಾಗಿ ಎರಡು ವರ್ಷಗಳ ಕಾಲ ಸಮಯ ಕೊಟ್ಟಿದ್ದಾರೆ.. 14 ವರ್ಷನ್ ಗಳಲ್ಲಿ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡಿದ್ದಾರೆ.. ಇದು ಪೌರಾಣಿಕ ಚಿತ್ರಕಥೆಯ ಸಿನಿಮಾ ಆಗಿರೋದ್ರಿಂದ ಎರಡು ಭಾಗಗಳಲ್ಲಿ ಈ ಚಿತ್ರವನ್ನ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.. ಇನ್ನೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರಕ್ಕಾಗಿ ಸುಮಾರು 75 ರಿಂದ 90 ಕೋಟಿ ರೂಪಾಯಿಗಳನ್ನ ಖರ್ಚು ಮಾಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುವ ಪ್ಲಾನ್ ಮಾಡ್ತಿದ್ದಾರೆ.. ಇನ್ನೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಚಿತ್ರೀಕರಣಕ್ಕಾಗಿ  ಜೈಸಲ್ಮೇರ್, ಜೈಪುರ ಸೇರಿದಂತೆ ಹಲವೆಡೆ ಲೊಕೇಶನ್ ಗಳನ್ನೂ ಹುಡುಕಾಡಿದ್ದಾರೆ.. ಜುಲೈ ಅಂತ್ಯತ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷೆ ಇದ್ದು, ಆಗಸ್ಟ್ ತಿಂಗಳಿನಿಂದ ಶೂಟಿಂಗ್,ಆರಂಭವಾಗುವ ಸಾಧ್ಯತೆ ಇದೆ.. ಒಟ್ಟಾರೆ ದರ್ಶನ್ ಅವರ ರಾಜವೀರ ಮದಕರಿ ನಾಯಕ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ..

ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss