ರಾಜಮೌಳಿ ಸಿನಿಮಾಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ವಿಚಾರಗಳು ಇರುತ್ತವೆ ಎನ್ನುವ ಆರೋಪ ಇದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬಾಹುಬಲಿ’ ಹಾಗೂ ‘ಆರ್‌ಆರ್‌ಆರ್’ ಕಥೆ ಹುಟ್ಟಿರುವ ಬಗ್ಗೆ ಅವರು ಮಾತನಾಡಿದ್ದಾರೆ. ‘ಬಾಹುಬಲಿ ಸಿನಿಮಾ ಕಾಲ್ಪನಿಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಬಿಜೆಪಿಯ ಅಜೆಂಡಾಕ್ಕೆ ತಕ್ಕಂತೆ ಐತಿಹಾಸಿಕ ಪಾತ್ರಗಳನ್ನು ಬಿಂಬಿಸುವುದು, ಇತಿಹಾಸ ತಿರುಚಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ‘ಆರ್‌ಆರ್‌ಆರ್’ ಸಿನಿಮಾ ಡಾಕ್ಯುಮೆಂಟರಿ ಅಲ್ಲ. ಇದು ಇತಿಹಾಸದ ಪಾಠವಲ್ಲ. ಇದು ನೈಜ ಪಾತ್ರಗಳ ಮೇಲೆ ಸಿದ್ಧವಾದ ಕಾಲ್ಪನಿಕ ಕಥೆ.

ನಾನು ಮೊದಲು ಭೀಮ್ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದೆ. ಭೀಮ್ ಮುಸ್ಲಿಂ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ. ಬಿಜೆಪಿ ನಾಯಕರೊಬ್ಬರು ‘ಆರ್‌ಆರ್‌ಆರ್’ ರಿಲೀಸ್ ಆದ ಥಿಯೇಟರ್‌ಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದರು. ಕ್ಯಾಪ್ ತೆಗೆಯದಿದ್ದರೆ ನನ್ನನ್ನು ರಸ್ತೆಯಲ್ಲಿ ಥಳಿಸುವುದಾಗಿ ಹೇಳಿದರು. ಹಾಗಾಗಿ ನಾನು ಬಿಜೆಪಿಯವನೋ ಅಲ್ಲವೋ ಎಂಬುದನ್ನು ಜನರೇ ನಿರ್ಧರಿಸಬಹುದು.

ಮುಸ್ಲಿಂ ಲೀಗ್ ಅಥವಾ ಯಾವುದೇ ಆಗಿರಲಿ. ಸಮಾಜದಲ್ಲಿ ಎಲ್ಲಾ ವಿಭಾಗದಲ್ಲಿರುವ ತೀವ್ರವಾದಿಗಳನ್ನು ದ್ವೇಷಿಸುತ್ತೇನೆ. ಇದು ನಾನು ನೀಡಬಹುದಾದ ಸರಳ ವಿವರಣೆ’ ಎಂದಿದ್ದಾರೆ ಅವರು.




