BREAKING NEWS: ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟ: ಬಿಜೆಪಿ ಮೂವರು, ಕಾಂಗ್ರೆಸ್ ಓರ್ವ ಅಭ್ಯರ್ಥಿ ಗೆಲುವು

ಬೆಂಗಳೂರು: ಇಂದು ನಡೆದಂತ ರಾಜ್ಯಸಭೆ ಚುನಾವಣೆಯ ಮತಏಣಿಕೆ ಕಾರ್ಯ ಅಂತಿಮ ಹಂತದಲ್ಲಿದ್ದು, ಕಣದಲ್ಲಿದ್ದಂತ ಬಿಜೆಪಿಯ ಮೂವರು ಅಭ್ಯರ್ಥಿಗಳು, ಕಾಂಗ್ರೆಸ್ ನ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದೆ.

ಬಿಜೆಪಿಯ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಲೇಹರ್ ಸಿಂಗ್ ಮೂವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಜೈರಾಂ ರಮೇಶ್ ಗೆಲುವು ಸಾಧಿಸಿದ್ರೇ, ಮನ್ಸೂರ್ ಆಲಿ ಖಾನ್ ಸೋತು ಕಂಡಿದ್ದಾರೆ. ಜೆಡಿಎಸ್ ನಿಂದ ರಾಜ್ಯಸಭೆ ಚುನಾವಣೆಗೆ ಕಣಕ್ಕೆ ಇಳಿದಿದ್ದಂತ ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ.

ಇಲ್ಲಿಯವರೆಗೆ ಲಭ್ಯವಾದಂತ ಮೊದಲ ಪ್ರಾಶಸ್ತ್ಯದ ಮತಗಳ  ವಿವರದಂತೆ ಬಿಜೆಪಿ ನಿರ್ಮಲಾ ಸೀತಾರಾಮನ್ 46, ನಟ ಜಗ್ಗೇಶ್ 44 ಹಾಗೂ ಲೇಹರ್ ಸಿಂಗ್ 33 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ಜೈರಾಂ ರಮೇಶ್ 46 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೇ, ಮತ್ತೊಬ್ಬ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ 25 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ 30 ಮತ ಪಡೆದು ಸೋಲು ಕಂಡಿದ್ದಾರೆ.

About The Author