ನವದೆಹಲಿ: ಚೀನಾ ಯುದ್ಧದ ಬೆದರಿಕೆಯನ್ನು ಭಾರತ ನಿರ್ಲಕ್ಷಿಸುತ್ತಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ, ರಾಹುಲ್ ಅವರು ಸೇನೆಯ ಧೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತು ಅವರ ಮುತ್ತಜ್ಜ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ವಿರುದ್ಧವೂ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಹುಲ್ ಗಾಂಧಿ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್, ರಾಹುಲ್ ಗಾಂಧಿಯವರಿಗೆ ಚೀನಾದೊಂದಿಗೆ ಒಡನಾಟ ಇರಬೇಕು. ಅವರು ತುಂಬಾ ಚೀನಾ ಜೊತೆ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ, ಚೀನಾ ಏನು ಮಾಡುತ್ತದೆ ಎಂದು ಅವರಿಗೆ ತಿಳಿದಿದೆ ಎಂದು ತಿರುಗೇಟು ನೀಡಿದ್ದಾರೆ.
ವಿಷ್ಣು ಮತ್ತು ಲಕ್ಷ್ಮೀಯ ನಡುವೆ ನಡೆದಿತ್ತು ದೊಡ್ಡ ಜಗಳ.. ಭಾಗ 2
ರಾಹುಲ್ ಗಾಂಧಿಯವರು ತಮ್ಮ ಯಾತ್ರೆಯಲ್ಲಿ ಭಾರತೀಯ ಭದ್ರತೆ ಮತ್ತು ಗಡಿ ಪ್ರದೇಶಗಳ ಬಗ್ಗೆ ದೇಶದಲ್ಲಿ ಗೊಂದಲವನ್ನು ಉಂಟು ಮಾಡಲು ಮತ್ತು ಭಾರತೀಯ ಸೈನಿಕರನ್ನು ಕುಗ್ಗಿಸುವಂತೆ ಮಾತನಾಡಿದ್ದಾರೆ. ಇದು ಅವರ ಮುತ್ತಾತಾ ನೆಹರು ಅವರ ಭಾರತವಲ್ಲ, ರಾಹುಲ್ ಗಾಂಧಿಯವರು ಸ್ವತಃ ಮರು ಪ್ರಾರಂಭಿಸುವ” ಪ್ರಯತ್ನದಲ್ಲಿ “ರಾಷ್ಟ್ರೀಯ ಭದ್ರತೆಯ ಬಗ್ಗೆ ಬೇಜವಾಬ್ದಾರಿ ಟೀಕೆಗಳನ್ನು ಮಾಡಬಾರದು ಎಂದು ಅವರು ತಿಳಿಸಿದರು.
ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಭಾರತ್ ಜೋಡೋ ಯಾತ್ರೆಯ ನಿಲುಗಡೆಯಲ್ಲಿ ಪತ್ರಕರ್ತರೊಂದಿಗೆ ರಾಹುಲ್ ಗಾಂಧಿ ಅವರು ಮಾತನಾಡಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಮತ್ತು ಭಾರತ ಸರ್ಕಾರ ಅದರ ಬಗ್ಗೆ ನಿದ್ರಿಸುತ್ತಿದೆ ಮತ್ತು ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.