National News: ಕಾಂಗ್ರೆಸ್ ಪಕ್ಷದ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್ ಗಾಂಧಿಯವರು ಪ್ರಧಾನಿ ಪಟ್ಟ ಏರಲು ಏನು ಮಾಡಬೇಕು ಎಂದು ರಾಖಿ ಸಾವಂತ್ ಟಿಪ್ಸ್ ಕೊಟ್ಟಿದ್ದಾರೆ. ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಂಡಿರುವ ಸಮಯದಲ್ಲಿಯೇ ರಾಖಿ ಸಾವಂತ್ ರಾಹುಲ್ ಗಾಂಧಿಯವರು ಪ್ರಧಾನಿಯಾಗಲು ಏನು ಮಾಡಬೇಕು ಎಂದು ಸುಲಭದ ಟಿಪ್ಸ್ ಕೊಟ್ಟಿದ್ದಾರೆ.
ಅಷ್ಟಕ್ಕೂ ರಾಖಿ ಹೇಳಿದ್ದೇನೆಂದರೆ, ರಾಹುಲ್ ಗಾಂಧಿಯವರು ಬಿಗ್ಬಾಸ್ಗೆ ಒಮ್ಮೆ ಹೋಗಬೇಕು ಎನ್ನುವುದು. ರಾಹುಲ್ ಗಾಂಧಿಯವರು ಬಿಗ್ಬಾಸ್ ಮನೆಯೊಳಕ್ಕೆ ಹೋದರೆ ಅವರ ಕೀರ್ತಿ ಹೆಚ್ಚುತ್ತದೆ. ಅವರು ಪ್ರಧಾನಿಯಾಗುತ್ತಾರೆ ಎಂದಿದ್ದಾರೆ ರಾಖಿ. ಬಿಗ್ಬಾಸ್ ಹಲವರಿಗೆ ಭವಿಷ್ಯ ನೀಡಿದೆ. ಅದೇ ರೀತಿ ರಾಹುಲ್ ಗಾಂಧಿಯವರಿಗೂ ನೀಡುತ್ತದೆ ಎಂದಿದ್ದಾರೆ ರಾಖಿ.
राखी सावंत ने राहुल गांधी को दिया 2024 लोकसभा जीतने का मंत्र
कहा, "अगर आप बिग बॉस में जाएंगे तो चुनाव जीत जाएंगे"
Rakhi Sawant | #RakhiSawant | Bigg Boss #Sachtaknews pic.twitter.com/XmTbdX7MrG
— SACH TAK NEWS (@SachTakNo1) July 11, 2023