ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಗೊತ್ತಾ ?

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಗಿದ ಬಳಿಕ ನನ್ನ ಸಿನಿಮಾ ಲೈನ್ ಅಪ್ ಹೀಗಿರಲಿದೆ.. ರಿಚರ್ಡ್ ಆಂಟನಿ, ಪುಣ್ಯಕೋಟಿ 1, ಪುಣ್ಯಕೋಟಿ 2 ಮತ್ತು ಮಿಡ್ನೈಟ್ ಟು ಮೋಕ್ಷ ಈ ನಾಲ್ಕು ಸಿನಿಮಾಗಳಿಗೆ ನಾನು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಸದ್ಯಕ್ಕೆ ಕಿರಿಕ್ ಪಾರ್ಟಿ 2 ಇಲ್ಲ

ಹೊಂಬಾಳೆ ಫಿಲಂಸ್ ಜತೆಗೆ ರಿಚರ್ಡ್ ಆಂಟನಿ ಸಿನಿಮಾಕ್ಕೂ ರಕ್ಷಿತ್ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ತೆರೆಮರೆಯಲ್ಲಿ ಆ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ, ಕನ್ನಡದ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಅವರು ನಟಿಸಲಿದ್ದಾರೆ ಎಂಬೆಲ್ಲ ಸುದ್ದಿಯಾಗಿತ್ತು.
ಕಿರಿಕ್ ಪಾರ್ಟಿ-2 ಸಿನಿಮಾದ ಬಗ್ಗೆ ಬೇರೆ ಪ್ಲಾನ್ ಇದೆ. ಆದರೆ ಈಗ ಹರಿದಾಡುತ್ತಿರೋ ಸುದ್ದಿಗಳು ನಿಜ ಅಲ್ಲವೇ ಅಲ್ಲ. ಮುಂದೆ ಎಂದೂ ಇವು ನಿಜ ಆಗೋದೂ ಇಲ್ಲ. ಲವ್ ಯೂ ಆಲ್ ಅಂತಲೇ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.




