Wednesday, November 26, 2025

Latest Posts

ಗಿಲ್ಲಿ ವಿರುದ್ಧ ನಿಂತ ವಂಶದ ಕುಡಿ ರಕ್ಷಿತಾ !

- Advertisement -

ಬಿಗ್ ಬಾಸ್ ನೋಡೋ ಜನತೆ , ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಪೈಕಿ ಗಿಲ್ಲಿಯನ್ನ ಇಷ್ಟಪಡೋರೆಲ್ಲಾ ರಕ್ಷಿತಾನ ಇಷ್ಟ ಪಟ್ಟೇ ಪಡ್ತಾರೆ, ಗಿಲ್ಲಿಯ ವಂಶದ ಕುಡಿ ಅನ್ನೋ ಬಿರುದನ್ನ ಕೂಡ ಗಿಲ್ಲಿ ರಕ್ಷಿತಾಗೆ ಕೊಟ್ಟು ಬಿಟ್ಟಿದ್ದಾರೆ, ಆದ್ರೆ ರಕ್ಷಿತಾ ಯಾಕೋ ದಾರಿ ತಪ್ಪುತ್ತಿದ್ದಾರಾ ? ಅನ್ನೋ ಅನುಮಾನ ವ್ಯಕ್ತವಾಗ್ತಿದೆ, ಯಾಕಂದ್ರೆ ರಕ್ಷಿತಾ ನಾಮಿನೇಷನ್ ಸಂದರ್ಭದಲ್ಲಿ ಆಶ್ಚರ್ಯ ಅನ್ನೋವಂತೆ ಗಿಲ್ಲಿ ಕಾವ್ಯನ ನಾಮಿನೇಟ್ ಮಾಡಿದ್ದು, ಅದ್ರಲ್ಲೂ ಅಲ್ಲಿ ಜಾನ್ವಿ ಪರವಾಗಿ ವಾದ ಮಾಡಿದ್ದು….

ರಕ್ಷಿತಾ ಎಲ್ಲೊ ಜಾನ್ವಿ ಮಾತಿಗೆ ಟ್ರ್ಯಾಪ್ ಆಗಿ ಗಿಲ್ಲಿ ವಿರುದ್ಧ ಟೊಂಕ ಕಟ್ಟಿ ನಿಂತ್ರಾ ಅಂತ ಅಭಿಮಾನಿಗಳು ಕೇಳ್ತಿದ್ದಾರೆ, ರಕ್ಷಿತಾ ಎಲ್ಲೊ ಜಾನ್ವಿ- ಗಿಲ್ಲಿ ನಡುವೆ ನಡೆದಂತ ವಾದ ವಿವಾದದಲ್ಲಿ ನಿಜ್ವಾಗ್ಲೂ ಏನಾಯ್ತು ? ಯಾರು ಸರಿ, ಯಾರು ತಪ್ಪು ಅನ್ನೋದು ತಿಳಿಯದೆ ದುಡುಕಿ ಬಿಟ್ರಾ ? ಅನ್ನೋ ಅಭಿಪ್ರಾಯ ವ್ಯಕ್ತವಾಗ್ತಿದೆ, ವಂಶದ ಕುಡಿ ತನ್ನ ಅಣ್ಣ ಗಿಲ್ಲಿ ವಿರುದ್ಧವೇ ತಿರುಗಿಬಿದ್ದಿದ್ದು, ರಕ್ಷಿತಾ ಬದಲಾವಣೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ…

ನಾಮಿನೇಟ್ ಮಾಡೋವಾಗ ‘ಗಿಲ್ಲಿ ಅವರು ಆ್ಯಂಕರ್​ಗಳಿಗೆ ಅವಮಾನ ಮಾಡಿದ್ದಾರೆ ಅನ್ನೋದು ಜಾನ್ವಿ ಹೇಳಿದ ಮಾತಿನಿಂದ ಗೊತ್ತಾಯ್ತು. ಹೀಗಾಗಿ, ನಾನು ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಅಂತ ರಕ್ಷಿತಾ ಹೇಳಿದ್ರು. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಗಿಲ್ಲಿಗೂ ಇದನ್ನು ಅರಗಿಸಿಕೊಳ್ಳೊದು ಕಷ್ಟ ಆಯಿತು.ಇದಕ್ಕೆ ಉತ್ತರ ಕೊಟ್ಟ ಗಿಲ್ಲಿ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು, ಅಂತ ಕಿಚ್ಚನ ಸ್ಟೈಲಲ್ಲಿ ರಕ್ಷಿತಾಗೆ ಟಾಂಗ್ ಕೊಟ್ಟು ತಮ್ಮನ್ನ ಸಮರ್ಥಿಸಿಕೊಂಡರು, ಆದ್ರೂ ರಕ್ಷಿತಾ ಬಾರಿ ಬುದ್ದಿವಂತೆ ಅನ್ನೋದಂತೂ ಸತ್ಯ, ಯಾವಾಗ ಯಾರ ಪರವಾಗಿ ಇರ್ತಾರೆ , ಯಾವಾಗ ತಿರುಗಿ ಬೀಳ್ತಾರೆ ಅನ್ನೋದೇ ಗೊತ್ತಾಗಲ್ಲ, ರಕ್ಷಿತಾ ನಿಜವಾಗ್ಲೂ ಬಿಗ್ ಬಾಸ್ ಮನೆಯ ಕ್ಲೆವರ್ ಕಂಟೆಸ್ಟೆಂಟ್ ಅಂದ್ರೆ ತಪ್ಪಾಗಲ್ಲ….

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss