ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರೋಕೆ ರೆಡಿ ..!!

2022ರಲ್ಲಿ ಆಲಿಯಾ ಭಟ್​-ರಣಬೀರ್ ಕಪೂರ್ ಮದುವೆ ಆದರು. ಈ ವರ್ಷದ ಆರಂಭದಲ್ಲೇ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಹಸೆಮಣೆ ಏರಿದ್ದಾರೆ.ನಟಿ ರಾಕುಲ್ ಪ್ರೀತ್​ ಸಿಂಗ್​ಗೆ ಬಾಲಿವುಡ್​ನಲ್ಲಿ ದೊಡ್ಡ ಬೇಡಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅನೇಕ ಸ್ಟಾರ್​ ನಟರ ಜತೆ ರಾಕುಲ್​ ತೆರೆಹಂಚಿಕೊಂಡಿದ್ದಾರೆ. ಸದ್ಯ, ರಾಕುಲ್​ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಜಾಕಿ ಭಗ್ನಾನಿ ಜತೆ ರಾಕುಲ್ ಡೇಟಿಂಗ್​ ನಡೆಸುತ್ತಿದ್ದಾರೆ.

ಮೇ ತಿಂಗಳಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನಲಾಗುತ್ತಿದೆ. ಸದ್ಯ ಈ ವಿಚಾರದಲ್ಲಿ ಈ ಜೋಡಿ ಸ್ಪಷ್ಟನೆ ನೀಡುವ ಕೆಲಸ ಮಾಡಿಲ್ಲ. ಈ ಮೊದಲು ಕಿಯಾರಾ ಹಾಗೂ ಸಿದ್ದಾರ್ಥ್ ಕೂಡ ಮದುವೆ ವಿಚಾರದಲ್ಲಿ ಸೈಲೆಂಟ್ ಆಗಿದ್ದರು. ನಂತರ ಮದುವೆ ಆಗಿ ಸರ್​ಪ್ರೈಸ್ ನೀಡಿದ್ದರು. ರಾಕುಲ್ ಕೂಡ ಹಾಗೆಯೇ ಮಾಡಲಿದ್ದಾರೆ ಎನ್ನಲಾಗುತ್ತಿದೆ.

About The Author