Wednesday, February 5, 2025

Latest Posts

ರಾಜಮೌಳಿ ನಿರ್ದೇಶನದ ರಾಮ್ ಚರಣ್-ಜೂ.ಎನ್.ಟಿ.ಆರ್ ನಟನೆಯ ‘RRR’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್..!

- Advertisement -

ಬಾಹುಬಲಿ ಬ್ಲಕ್ ಬಸ್ಟರ್ ಹಿಟ್ ಬಳಿಕ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಜೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ್ ಆರ್.ಆರ್.ಆರ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ವರ್ಷದ ಅಕ್ಟೋಬರ್ 13ರಂದು ದೊಡ್ಡ ಪರದೆಯ ಮೇಲೆ ರಾಜಮೌಳಿ ಆರ್ ಆರ್ ಆರ್ ಸಿನಿಮಾದ ಆರ್ಭಟ ಶುರುವಾಗಲಿದೆ.

ಈ  ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ, ಅಕ್ಟೋಬರ್ 13 ಬೆಂಕಿ-ನೀರಿನ ತಡೆ ರಹಿತಕ್ಕೆ ಸಾಕ್ಷಿಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಆರ್ ಆರ್ ಆರ್ ಸಿನಿಮಾ ತೆಲುಗು ನಾಡಿನ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಾಂ ಭೀಮ್ ಕುರಿತಾದ ಸಿನಿಮಾವಾಗಿದ್ದು, ಅಲ್ಲೂರಿ ಸೀತಾರಾಮ ರಾಜು ರಾಮ್ ಚರಣ್ ಬಣ್ಣ ಹಚ್ಚಿದ್ರೆ, ಕೋಮರಾಂ ಭೀಮ್ ನಾಗಿ ಜೂನಿಯರ್ ಎನ್ ಟಿಆರ್ ನಟಿಸಿದ್ದಾರೆ.

ಅಲ್ಲದೇ ಬಾಲಿವುಡ್ ನ ಬ್ಯೂಟಿ ಅಲಿಯಾ ಭಟ್ ಹಾಗೂ ಅಜಯ್ ದೇವಗನ್ ಸಹ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ.

ಈಗಾಗ್ಲೇ ಕೊನೆ ಹಂತದ ಶೂಟಿಂಗ್ ಮುಗಿಸಿರೋ ಆರ್ ಆರ್ ಆರ್ ಟೀಂ, ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿರೋದು ಅಭಿಮಾನಿಗಳಿಗೆ ಸಖತ್ ಖುಷಿಕೊಟ್ಟಿದೆ. ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ಸ್ ಆದ ರಾಮ್ ಚರಣ್ ಹಾಗೂ ಜೂ.ಎನ್.ಟಿ.ಆರ್ ನ್ನು ಒಂದು ಸ್ಕ್ರೀನ್ ನಲ್ಲಿ ನೋಡಲು ಕಾತುರರಾಗಿದ್ದಾರೆ.

- Advertisement -

Latest Posts

Don't Miss