Sunday, September 8, 2024

Latest Posts

ಬಿಗ್-ಬಿ ಜೊತೆಗೆ ಹಾರರ್ ಫೀಲ್ಮ್ ಮಾಡುತ್ತಾರಂತೆ ರಾಮ್ ಗೋಪಾಲ್ ವರ್ಮಾ

- Advertisement -

ಲಾತ್ಮಕ ಸಿನಿಮಾಗಳನ್ನು ಮಾಡುವದರಲ್ಲಿ ಹೆಸರುವಾಸಿಯಾದ ಖ್ಯಾತ ನಿದೇರ್ಶಕ ರಾಮ್ ಗೋಪಾಲ್ ವರ್ಮಾ ಶೀಘ್ರದಲ್ಲೇ ಹಾರರ್ ಸಿನಿಮಾವೊಂದನ್ನು ಮಾಡಲು ಮುಂದಾಗಿದ್ದಾರೆ. ಈ ಕುರಿತು ಖಾಸಗಿ ವಾಹಿನಿಯ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ,  ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಹಾರರ್ ಚಿತ್ರ ಮಾಡುವ ಯೋಜನೆಯ ಬಗ್ಗೆ ಬಹಿರಂಗಪಡಿಸಿದರು. ನೀವು ಊಹಿಸಿದಂತೆ, ಅದು ಅಮಿತಾಭ್ ಬಚ್ಚನ್ ಹೊರತು ಬೇರೆ ಯಾರೂ ಅಲ್ಲ ಎಂದಿದ್ದಾರೆ. ಇದನ್ನೂ ಓದಿ:  ಕೊಲೆಯ ಲೈವ್ ವಿಡಿಯೋ ಮಾಡಿ ಸಿಕ್ಕಿಬಿದ್ದ ಪ್ರೇಯಸಿ

ಅಮಿತಾಬ್ ಬಚ್ಚನ್ ಮತ್ತು ರಾಮ್ ಗೋಪಾಲ್ ವರ್ಮಾ ದೀರ್ಘಕಾಲದ ಒಡನಾಟವನ್ನು ಹೊಂದಿದ್ದಾರೆ. ಈ ಹಿಂದೆ ರಾಮ್ ಬಿಗ್-ಬಿಯ ಅನೇಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದು, ಸರ್ಕಾರ್,  ಸರ್ಕಾರ್ ರಾಜ್,  ಸರ್ಕಾರ್ 3, ರನ್, ಮತ್ತು ನಿಶಬ್ದ್  ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಇದಾದ ಬಳಿಕ ಅವರು ಒಟ್ಟಿಗೆ ಕೆಲಸ ಮಾಡಿ ಐದು ವರ್ಷಗಳೇ ಕಳೆದಿತ್ತು.

ನಾವು ಈಗಾಗಲೇ ಈ ಚಿತ್ರದ ಕುರಿತು ಅಮಿತಾಭ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ಇದೊಂದು ಭಯಾನಕ ಚಿತ್ರವಾಗಿದ್ದು ನಾನು ಅದನ್ನು ಮಿಸ್ಟರ್ ಬಚ್ಚನ್ ಜೊತೆ ಮಾಡಲು ಯೋಜಿಸುತ್ತೇನೆ ಎಂದಿದ್ದಾರೆ.  ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಹಾರರ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದದ್ದು ಇದೇ ಮೊದಲೇನಲ್ಲ. ಈ ಹಿಂದೆ ರಾತ್, ಭೂತ್, ಭೂತ್ ರಿಟರ್ನ್ಸ್, ಡರ್ನಾ ಮನಾ ಹೈ, ವಾಸ್ತು ಶಾಸ್ತ್ರದಂತಹ ಅನೇಕ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ: 50 ವರ್ಷ ಪೂರೈಸಿದ ಸೌರವ್ ದಾದಾ

ಪ್ರಸ್ತುತ ರಾಮ್ ತಮ್ಮ ಮುಂಬರುವ ಚಿತ್ರ ಲಡ್ಕಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಜುಲೈ 15 ರಂದು ಬಿಡುಗಡೆಯಾಗಲಿದೆ. ಇದರ ಮಧ್ಯೆ ಅಮಿತಾಭ್ ಬಚ್ಚನ್ ಅವರು ಬ್ರಹ್ಮಾಸ್ತ್ರ, ಗುಡ್ ಬೈ, ಉಂಚೈ ಹೀಗೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

- Advertisement -

Latest Posts

Don't Miss