Saturday, November 23, 2024

Latest Posts

ಐಎಎಸ್‌ ಅಧಿಕಾರಿಯ ದೌಲತ್ತು! ಜನಸ್ಪಂದನದಲ್ಲಿ ಮೊಬೈಲ್‌ ಆಟ; ಕೇಳೋರಿಲ್ಲ ಜನರ ಸಂಕಟ

- Advertisement -

ರಾಮನಗರ: ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೆ ಜನರು ಸಂಕಷ್ಟದಲ್ಲಿದ್ದಾರೆ. 236 ತಾಲೂಕುಗಳಲ್ಲಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನು ರಾಜ್ಯ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಜನಸ್ಪಂದನ ಸಭೆಯಲ್ಲಿ ಐಎಎಸ್‌ ಅಧಿಕಾರಿಯೊಬ್ಬರು (‌IAS Officer) ವೇದಿಕೆಯಲ್ಲಿ ಮೊಬೈಲ್‌ ಗೇಮ್‌ ಆಡುತ್ತಾ ಕುಳಿತು ದೌಲತ್ತು ಮೆರೆದಿದ್ದಾರೆ.

ರಾಮನಗರ ಜಿಪಂ ಸಿಇಒ ಅವರ ಈ ಕ್ರಮ ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ಮೊಬೈಲ್‌ನಲ್ಲಿ ಮುಳುಗುವುದು ಎಷ್ಟು ಸರಿ? ಅಧಿಕಾರಿಗಳು ಇರುವುದು ಜನ ಸೇವೆ ಮಾಡಲೋ? ಅಥವಾ ಉಡಾಫೆಯಿಂದ ನಡೆದುಕೊಳ್ಳಲೋ ಎಂಬ ಪ್ರಶ್ನೆಯನ್ನು ಇದೀಗ ಜನರು ಮಾಡುತ್ತಿದ್ದಾರೆ. ಇನ್ನು ಆ ಅಧಿಕಾರಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ನೀತಿ ರೂಪಿಸಬೇಕು ಎಂದು ಬಿಜೆಪಿ ಸೇರಿದಂತೆ ರಾಜಕೀಯ ನಾಯಕರು ಆಗ್ರಹಿಸಿದ್ದಾರೆ.

ರಾಮನಗರ ತಾಲೂಕಿನ ಮಾಗಡಿಯಲ್ಲಿ ಶುಕ್ರವಾರ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಎಎಸ್‌ಪಿ ಟಿ.ವಿ.ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಐಎಎಸ್‌ ಅಧಿಕಾರಿ, ಸಿಇಒ ದಿಗ್ವಿಜಯ್‌ ಬೋಡ್ಕೆ ಅವರು ಕಾಲು ಮೇಲೆ ಕಾಲು ಹಾಕಿಕೊಂಡು ತಮ್ಮ ಮೊಬೈಲ್‌ನಲ್ಲಿ ಕ್ಯಾಂಡಿ ಕ್ರಶ್‌ ಆಟವಾಡುತ್ತಾ ಕುಳಿತಿದ್ದರು. ಇದು ನ್ಯೂಸ್‌ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದೆ. ಐಎಎಸ್‌ ಅಧಿಕಾರಿಯ ಈ ನಡೆಗೆ ಜನರು ಛೀಮಾರಿ ಹಾಕುತ್ತಿದ್ದಾರೆ.

ಜನಸ್ಪಂದನ ಸಭೆಯಲ್ಲಿ ಸಿಇಒ ದೌಲತ್ತು
ಜನಸ್ಪಂದನಾ ಸಭೆಯಲ್ಲಿ ಸಿಇಒ ಆದವರು ಈ ರೀತಿಯ ದೌಲತ್ತು ಮಾಡಬಾರದಿತ್ತು ಎಂದು ಜನಸಾಮಾನ್ಯರು ಸಾಕಷ್ಟು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇವರು ಟೈಂ ಪಾಸ್‌ ಅಧಿಕಾರಿ ಎಂದು ದೂರಿದ್ದಾರೆ. ಇಂತಹ ಅಧಿಕಾರಿಗಳು ನಮ್ಮ ನಾಡಿಗೆ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ಕಡೆ ಸಚಿವರಿಂದ ಗಂಭೀರ ಸಭೆ ನಡೆಯುತ್ತಿದ್ದರೆ, ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತವಾಗಿ ಸ್ಪಂದಿಸಬೇಕಿದ್ದ ಅಧಿಕಾರಿಯೊಬ್ಬರು ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಆಟ!: ಸಚಿವ ರಾಮಲಿಂಗಾ ರೆಡ್ಡಿ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಾ ಕುಳಿತಿದ್ದರೂ ಐಎಎಸ್‌ ಅಧಿಕಾರಿ, ಸಿಇಒ ದಿಗ್ವಿಜಯ್‌ ಬೋಡ್ಕೆ ಕಾಲು ಮೇಲೆ ಕಾಲು ಹಾಕಿಕೊಂಡು ಅತ್ತ ಗಮನವನ್ನೇ ಕೊಡದೆ ಆಟ ಆಡುತ್ತಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಜನರೇ ಬನ್ನಿ, ನಿಮ್ಮ ಕಷ್ಟಗಳನ್ನು ನಾವು ಪರಿಹರಿಸುತ್ತೇವೆ ಎಂದು ಕರೆಯಲಾಗುತ್ತದೆ. ಆದರೆ, ಇಲ್ಲಾಗುತ್ತಿರುವುದು ಏನು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್‌

Reporter: ಬ್ರಿಟನ್ ಮಾಜಿ ಪ್ರಧಾನಿ ಈಗ ನ್ಯೂಸ್‌ ಚಾನೆಲ್‌ನಲ್ಲಿ ಆ್ಯಂಕರ್!

ಡಿಕೆಶಿ ಹೊರಗಿಟ್ಟು ಕೈ ನಾಯಕರ ಡಿನ್ನರ್ ಪಾಲಿಟಿಕ್ಸ್; ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ

- Advertisement -

Latest Posts

Don't Miss