Sunday, April 13, 2025

Latest Posts

ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಸಾವು

- Advertisement -

ಕರ್ನಾಟಕ ಟಿವಿ : ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಅಪಘಾತ ಸಂಭವಿಸಿ ರಾಮನಗರದ ಪಬ್ಲಿಕ್ ಟಿವಿ‌ ವರದಿಗಾರ ಹನುಮಂತು ಸಾವನ್ನಪ್ಪಿದ್ದಾರೆ.. ರಾಮನಗರದ ಕಾರಾಗೃಹದ ಬಳಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ವರದಿಗಾರ ಹನುಮಂತು ಸಾವನ್ನಪ್ಪಿದ್ದಾರೆ.  ಮೃತ ವರದಿಹಾರ ಹನುಮಂತು ವಿವಾಹವಾಗಿ ಮೂರು ವರ್ಷವಾಗಿತ್ತು. ದಂಪತಿಗೆ ಒಂದು ವರ್ಷದ ಒಂದು ಮಗುವಿದೆ.. ಕಳೆದ 6 ವರ್ಷಗಳಿಂದಲೂ ಹನುಮಂತು ರಾಮನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಹಾಗೂ ಪಬ್ಲಿಕ್ ಟಿವಿ ಸಿಬ್ಬಂದಿ ಕಂಬನಿ‌ ಮಿಡಿದಿದ್ದಾರೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

https://www.youtube.com/watch?v=pninsHV5dqs
- Advertisement -

Latest Posts

Don't Miss