www.karnatakatv.net : ದೇಶದ ವಿವಿಧ 12 ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ನೇಮಕಾತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮತಿ ನೀಡಿದರು. ದಕ್ಷಿಣ ಬಿಹಾರದ ಕೇಂದ್ರ ವಿಶ್ವ ವಿದ್ಯಾಲಯ , ಮಣಿಪುರ ವಿಶ್ವವಿದ್ಯಾಲಯ, ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ಈಶಾನ್ಯ ಹಿಲ್ ವಿಶ್ವವಿದ್ಯಾಲಯ ಮತ್ತು ಬಿಲಾಸ್ಪುರದ ಗುರು ಘಾಸಿದಾಸ್ ವಿಶ್ವವಿದ್ಯಾಲಯಗಳಿಗೆ ಹೊಸ ವಿಸಿಗಳನ್ನು ನೇಮಕ ಮಾಡಿರುವ ವಿಶ್ವವಿದ್ಯಾಲಯಗಳಲ್ಲಿ ಸೇರಿವೆ. ಕರ್ನಾಟಕದ ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯ ಸೇರಿದಂತೆ ದೇಶದ 12 ವಿವಿಗಳಿಗೆ ಕುಲಪತಿ ನೇಮಕಕ್ಕೆ ಅನುಮತಿ ನೀಡಲಾಗಿದೆ.




