ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೆಗಾಸ್ಟಾರ್ ಸೊಸೆ ಉಪಾಸನಾ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ.
ಉಪಾಸನಾ ಅವರು ರಾಮ್ ಚರಣ್ ಅವರ ಪತ್ನಿಯಷ್ಟೇ ಅಲ್ಲ, ಅಪೋಲೋ ಆಸ್ಪತ್ರೆಯ ಮುಖ್ಯಸ್ಥರ ಮೊಮ್ಮಗಳು ಕೂಡ.ಮದುವೆಯ ನಂತರ 14 ಕೆಜಿ ತೂಕ ಇಳಿಸಿಕೊಂಡಿದ್ದ ಉಪಾಸನಾ ಫುಲ್ ಫಿಟ್ ನೆಸ್ ಕಾಯ್ದುಕೊಂಡಿದ್ರು. ಹೆಲ್ದ್ ಟಿಪ್ಸ್ ನೀಡುತ್ತಾ ಸಾಮಾಜಿಕ ಜಾಲತಾಣಗಳ ಅನೇಕ ಅಭಿಮಾನಿಗಳನ್ನು ಹೊಂದಿದ್ದರು.
ತಾನು ಗರ್ಭಿಣಿ ಎಂಬ ವಿಚಾರವನ್ನು ಹಂಚಿಕೊಂಡಿದ್ದರು. ಚಿರಂಜೀವಿ ಮೊಮ್ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ರು.
ರಾಮಚರಣ್ ಹಾಗೂ ಉಪಾಸನಾ ಹಂಚಿಕೊಂಡ ಈ ಫೋಟೋಗಳಲ್ಲಿ ಉಪಾಸನಾಗೆ ಬೇಬಿ ಬಂಪ್ ಇದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಾಮ್ ಚರಣ್ ಮತ್ತು ಉಪಾಸನಾ ಮದುವೆ ಜೂನ್ 14, 2012 ರಂದು ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಅವರು ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ ಅವರ ಮೊಮ್ಮಗಳು, ಸೋಭಾನಾ ಮತ್ತು ಅನಿಲ್ ಕಾಮಿನೇನಿ ಅವರ ಪುತ್ರಿಯಾಗಿದ್ದಾರೆ
ರಾಮ್ ಚರಣ್ ಮತ್ತು ಉಪಾಸನಾ ಫೋಟೋ ವೈರಲ್
- Advertisement -
- Advertisement -