ರಾಮೋಜಿ ಫಿಲ್ಮ್ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ

National News: ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಸ್ಥಾಪಿಸಿ, ಎಷ್ಟೋ ಜನರಿಗೆ ಅನ್ನದಾತರಾಗಿದ್ದ ರಾಮೋಜಿ ರಾವ್ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾವ್, ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

87 ವರ್ಷದ ರಾಮೋಜಿ ರಾವ್, ಹುಟ್ಟು ಶ್ರೀಮಂತರೇನಲ್ಲ. ಅವರು ಕೂಡ ಬಡ ಕುಟುಂಬದಿಂದ ಬಂದು, ಕಷ್ಟಪಟ್ಟು ದುಡಿದು ಶ್ರೀಮಂತರಾದವರು. ಮೊದಲು ಸಿನಿಮಾ ನಿರ್ಮಾಣ ಮಾಡುತ್ತಿದ್ದ ರಾಮೋಜಿ, ಬಳಿಕ ಸಿನಿಮಾ ನಿರ್ಮಾಣದಿಂದ ದೂರಾಗಿ, ರಾಮೋಜಿ ಫಿಲ್ಮ್ ಸಿಟಿ ಸ್ಥಾಪನೆ ಮಾಡಿದರು. ಎಷ್ಟೋ ಜನರಿಗೆ ಅಲ್ಲಿ ಉದ್ಯೋಗ ನೀಡಲಾಯಿತು.

ಅಲ್ಲದೇ ಎಷ್ಟೋ ಸಿನಿಮಾ, ಧಾರಾವಾಹಿಗಳು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡಲಾಗಿದ್ದು, ವಿಶ್ವದಲ್ಲೇ ದೊಡ್ಡ ಫಿಲ್ಮ್ ಸಿಟಿ ಅಂದ್ರೆ, ಅದು ರಾಮೋಜಿ ಫಿಲ್ಮ್ ಸಿಟಿ ಅಂತಾ ಹೇಳಲಾಗುತ್ತದೆ. ಇನ್ನು ರಾಮೋಜಿ ರಾವ್ ನಿಧನಕ್ಕೆ ಟಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿ ಹಲವು ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

About The Author