Sunday, October 5, 2025

Latest Posts

ಮೈಲಾರ ಲಿಂಗೇಶ್ವರ ಕಾರ್ಣಿಕ ಭವಿಷ್ಯವಾಣಿಯಿಂದ ಆತಂಕ

- Advertisement -

ಇಟ್ಟ ರಾಮರ ಬಾಣ ಹುಸಿಯಿಲ್ಲ. ಧರ್ಮ-ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರೂ ಎಚ್ಚರದಿಂದಿರಬೇಕು ಪರಾಕ್. ಇದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿಯವರ ಭವಿಷ್ಯವಾಣಿ.

ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ, ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ, ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿ ಕಾರ್ಣಿಕ ನುಡಿದಿದ್ದಾರೆ.

ಧರ್ಮ-ಅಧರ್ಮ ಸಂಕಷ್ಟವಾಯಿತು ಅಂದ್ರೆ, ರಾಜ್ಯದಲ್ಲಿ ಧರ್ಮದ ವಿಚಾರವಾಗಿ ಹಲವು ಘಟನೆಗಳು ನಡೆಯುತ್ತಲೇ ಇವೆ.
ಇತ್ತೀಚೆಗೆ ಜಾತಿ ಸಮೀಕ್ಷೆ ವೇಳೆ ಲಿಂಗಾಯತ, ಕುರುಬ, ಹಿಂದೂ , ಕ್ರಿಶ್ಚಿಯನ್‌, ಕ್ರಿಶ್ಚಿಯನ್ನೇತರ ವಿವಾದಗಳ ಬಗ್ಗೆಯೇ ಭವಿಷ್ಯವಾಣಿ ನುಡಿದಿರಬಹುದೆಂದು ಚರ್ಚಿಸಲಾಗುತ್ತಿದೆ.

ಧರೆಗೆ ವರುಣನ ಆಗಮನವಾಯಿತು. ಸರ್ವರೂ ಎಚ್ಚರದಿಂದಿರಬೇಕು ಪರಾಕ್ ಅಂತಾ ಕಾರ್ಣಿಕ ನುಡಿದಿದ್ದಾರೆ. ಇದರರ್ಥ, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಬೆಳೆ ನಾಶವಾಗಿದೆ. ದೇಶದ ಹಲವೆಡೆ ಜಲಪ್ರಳಯವೇ ಸಂಭವಿಸಿದೆ. ಮೇಘಾಲಯ, ಪಂಜಾಬ್, ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದ, ಸಾವುನೋವು ಹೆಚ್ಚಾಗುತ್ತಿದೆ. ಜಪಾನ್, ಪಾಕಿಸ್ತಾನದಲ್ಲೂ ಜಲಪ್ರಳಯ ಉಂಟಾಗಿದೆ ಎಂದು ವಿಶ್ಲೇಷಿಸಲಾಗ್ತಿದೆ.

ವಿಶ್ವಕ್ಕೆ ಶಾಂತಿಯ ಭಂಗವಾಯಿತು ಎಂದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ, ಕ್ರಿಕೆಟ್‌ ವಿಚಾರವಾಗಿ ನಡೆದ ವೈಮನಸ್ಸು ಹಾಗೂ ಇಸ್ರೇಲ್-ಇರಾನ್ ಯುದ್ಧ, ಉಕ್ರೇನ್-ರಷ್ಯಾ ಯುದ್ಧ, ಫಿಲಿಫೈನ್ಸ್‌ನಲ್ಲಿ ಭೂಕಂಪದಿಂದ ಸಾವು ನೋವು, ಹೀಗೆ ಇತ್ಯಾದಿ ವಿಚಾರಗಳನ್ನಿಟ್ಟುಕೊಂಡು ಕಾರ್ಣಿಕ ನುಡಿದಿದ್ದಾರೆ ಎನ್ನಲಾಗ್ತಿದೆ.

- Advertisement -

Latest Posts

Don't Miss