ಬೆಂಗಳೂರು: ನಿನ್ನೆ ಚಂದ್ರ ದರ್ಶನವಾಗದ ಕಾರಣ, ನಾಳೆ ರಂಜಾನ್ ಹಬ್ಬವನ್ನು ಆಚರಿಸೋದಕ್ಕೆ ವಕ್ಫ್ ಮಂಡಳಿ ತೀರ್ಮಾನಿಸಿದೆ.
ಈ ಕುರಿತು ಕೇಂದ್ರ ಚಂದ್ರ ದರ್ಶನ ಸಮಿತಿಯು ಮಾಹಿತಿ ನೀಡಿದ್ದು, ಭಾನುವಾರದಂದು ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ, ರಾಜ್ಯಾಧ್ಯಂತ ರಂಜಾನ್ ಹಬ್ಬವನ್ನು, ನಾಳೆ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಅಂದಹಾಗೇ ರಾಜ್ಯ ಸರ್ಕಾರ ನಾಳೆ ರಂಜಾನ್ ಹಬ್ಬದ ಪ್ರಯುಕ್ತ ನೀಡಲಾಗಿದ್ದಂತ ಸಾರ್ವತ್ರಿಕ ರಜೆಯನ್ನು, ಮೂನ್ ಕಮಿಟಿ ತೀರ್ಮಾನದ ಹಿನ್ನಲೆಯಲ್ಲಿ, ಇಂದಿಗೆ ನಿಗದಿ ಪಡಿಸಿತ್ತು. ಆದ್ರೇ.. ಇದೀಗ ನಿನ್ನೆ ಚಂದ್ರದರ್ಶನವಾಗದ ಕಾರಣ, ನಾಳೆ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ.




