ಬೆಂಗಳೂರು: ರಾಜ್ಯ ಸರ್ಕಾರದಿಂದ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು 2022ರ ಕ್ಯಾಲೆಂಟರ್ ಸರ್ಕಾರಿ ರಜೆ ದಿನಗಳ ಪಟ್ಟಿಯಲ್ಲಿ ದಿನಾಂಕ 03-05-2022ಕ್ಕೆ ನಿಗದಿ ಪಡಿಸಿ, ಘೋಷಿಸಿತ್ತು. ಆದ್ರೇ.. ಈ ರಜೆಯನ್ನು ಈಗ ದಿನಾಂಕ 03-05-2022ಕ್ಕೆ ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಬದಲಾವಣೆ ಆದೇಶ ಹೊರಡಿಸಿದ್ದು, ಮೂನ್ ಕಮಿಟಿಯು ರಂಜಾನ್ ಹಬ್ಬವನ್ನು ದಿನಾಂಕ 02-05-2022ರಂದು ಆಚರಿಸೋದಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ದಿನಾಂಕ 03-05-2022ರಂದು ರಂಜಾನ್ ಹಬ್ಬದ ಪ್ರಯುಕ್ತ ಘೋಷಿಸಿದ್ದಂತ ಸಾರ್ವತ್ರಿಕ ರಜೆಯನ್ನು ಬದಲಾವಣೆ ಮಾಡಲಾಗಿದೆ. ದಿನಾಂಕ 02-05-2022ರಂದು ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ನೀಡಲಾಗಿದೆ ಎಂದು ತಿಳಿಸಿದೆ.





