- Advertisement -
ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನರು ಮುತ್ತಿಕೊಂಡಿರುತ್ತಾರೆ. ನಗು ನಗುತ್ತಲೇ ರಣಬೀರ್ ಕಪೂರ್ ಸೆಲ್ಫಿಗೆ ಪೋಸ್ ಕೊಡ್ತಾರೆ. ಆದರೆ ಫೋಟೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗ್ತಾನೆ. 2-3 ಬಾರಿ ಫೋಟೋಗೆ ಪೋಸ್ ಕೊಟ್ಟ ರಣಬೀರ್ ಕಪೂರ್ ಕೋಪ ಮಾಡಿಕೊಳ್ತಾರೆ. ಬಳಿಕ ಅಭಿಮಾನಿ ಕೈಯಲ್ಲಿದ್ದ ಫೋನ್ ನನ್ನು ಕಿತ್ತುಕೊಂಡು ಎಸೆಯುತ್ತಾರೆ.
ಅಹಂಕಾರದಿಂದ ರಣಬೀರ್ ಕಪೂರ್ ಈ ರೀತಿ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಯಾರೇ ಆದ್ರೂ ಈ ರೀತಿ ವರ್ತನೆ ಸರಿ ಇಲ್ಲ ಎನ್ನುತ್ತಿದ್ದಾರೆ.
ಕಳೆದ ವರ್ಷ ರಿಲೀಸ್ ಆದ ಬ್ರಹ್ಮಾಸ್ತ್ರ ಸಿನಿಮಾದಿಂದ ರಣಬೀರ್ ಕಪೂರ್ ಅವರಿಗೆ ಯಶಸ್ಸು ಸಿಕ್ಕಿತು. ಆ ಗೆಲುವಿನ ಬಳಿಕ ಅವರ ಈ ರೀತಿ ವರ್ತಿಸಲು ಆರಂಭಿಸಿದ್ದಾರೆ
- Advertisement -