Wednesday, December 3, 2025

Latest Posts

ದೇವಿಯನ್ನು ದೆವ್ವ ಎಂದ ಯಡವಟ್ಟು – ರಿಷಬ್ ಶೆಟ್ಟಿಗೆ ರಣವೀರ್ ಕ್ಷಮಾಪಣೆ

- Advertisement -

ತುಳುನಾಡಿನ ದೈವವನ್ನು ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಬಾಲಿವುಡ್ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿಯ ಅಭಿನಯವನ್ನು ಹೊಗಳುವ ಸಂದರ್ಭದಲ್ಲಿ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ ಅದ್ಭುತ ಅಭಿನಯ ತೋರಿಸೋದು ನನ್ನ ಉದ್ದೇಶವಾಗಿತ್ತು. ಆ ಭರದಲ್ಲಿ ತಪ್ಪಾಗಿದೆ. ಯಾರಾದರೂ ನೋವನ್ನನುಭವಿಸಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿಯ ಅಭಿನಯವು ನಟನಾಗಿ ಎಷ್ಟು ಸವಾಲಿನದ್ದೋ ಗೆ ತಿಳಿದಿದೆ ಎಂದು ಹೇಳಿದ ರಣವೀರ್, ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ, ಹಿಂದೂ ಜನಜಾಗೃತಿ ಸಮಿತಿ ರಣವೀರ್ ವಿರುದ್ಧ ದೂರು ದಾಖಲಿಸಿದೆ. ಸಮುದಾಯ ಆರಾಧಿಸುವ ಚಾಮುಂಡಿದೇವಿಯನ್ನು “ಹೆಣ್ಣು ದೆವ್ವ” ಎಂದು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗೋವಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ರಿಷಬ್ ಶೆಟ್ಟಿಯ ಕಾಮಗಾರಿಯ ಕುರಿತು ಮಾತನಾಡುವಾಗ ರಣವೀರ್ ನೀಡಿದ ಹೇಳಿಕೆಗಳು ದೈವಾರಾಧಕರಲ್ಲಿ ಆಕ್ರೋಶ ಹುಟ್ಟಿಸಿವೆ.

ರಿಷಬ್ ಅಭಿನಯದ ಒಂದು ಪ್ರಮುಖ ದೃಶ್ಯವನ್ನು ಅನುಕರಣೆ ಮಾಡಿದ್ದ ರಣವೀರ್, ಅದನ್ನು ಪ್ರಶಂಸೆಯ ರೂಪದಲ್ಲೇ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರೂ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಕಾರ್ಯಕ್ರಮದ ವೇಳೆ ರಿಷಬ್ ಶೆಟ್ಟಿ ಮುಂದೆ ಕುಳಿತಿದ್ದರೂ, ಅವರ ನಗು ಬೇರೆ ಸಂದರ್ಭದಲ್ಲಿ ದಾಖಲಾಗಿದ್ದು, ಅದನ್ನು ಈ ಘಟನೆಗೆ ಸೇರಿಸಿ ಎಡಿಟ್ ಮಾಡಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಕ್ಷಮೆಯಾಚಿಸಿ ವಿಷಯಕ್ಕೆ ತೆರೆಬಿದ್ದಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss