Friday, July 4, 2025

Latest Posts

ದೋಷ ನಿವಾರಣೆಗೆ ಪೂಜೆ ಮಾಡಿಸಲು ಬಂದ ಭಕ್ತೆಯ ಮೇಲೆ ಅ*ತ್ಯಾಚಾರ: ಪೂಜಾರಿ ಅರೆಸ್ಟ್

- Advertisement -

Bengaluru News: ದೋಷ ನಿವಾರಣೆಗೆಂದು ಪೂಜೆ ಮಾಡಿಸಲು ಬಂದಿದ್ದ ಭಕ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಪೂಜಾರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಯಾಗಿರುವ ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿರುವ ಪುರದಮ್ಮ ದೇವಸ್ಥಾನದ ಪೂಜಾರಿ ದಯಾನಂದ್ (39) ಎಂಬಾತನನ್ನು, ಬಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಹಿಳೆಗೆ ಇರುವ ದೋಷವನ್ನು ನಿವಾರಿಸುತ್ತೇನೆ ಎಂದು ಹೇಳಿ, ದುಡ್ಡು ಪಡೆದು ಪೂಜಾರಿ ಪೂಜೆ ಮಾಡಿಸಲು ಕರೆದಿದ್ದಾರೆ. ಮಹಿಳೆ ದುಡ್ಡು ಕೊಟ್ಟು, ಪೂಜೆಗೆಂದು ಹೋದಾಗ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ಹಿನ್ನೆಲೆ ಪೊಲೀಸರು ದಯಾನಂದ್‌ನನ್ನು ಬಂಧಿಸಿದ್ದಾರೆ.

- Advertisement -

Latest Posts

Don't Miss