Sandalwood News: ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ತಮ್ಮ ವೈವಾಹಿಕ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದು, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಬಿಗ್‌ಬಾಸ್ ಕನ್ನಡದಲ್ಲಿ ಸ್ಪರ್ಧಿಗಳಾಗಿ ಬಂದಾಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ನೇಹ ಬೆಳೆದಿತ್ತು. ಬಿಗ್‌ಬಾಸ್‌ನಲ್ಲಿ ಇಬ್ಬರೂ ನಾವು ಅಣ್ಣ ತಂಗಿ ಇದ್ದ ಹಾಗೆ ಎಂದು ಹೇಳಿಕೊಂಡಿದ್ದರು. ಆದರೆ ಬಳಿಕ ಅವರಿಬ್ಬರು ಪ್ರೀತಿಸುವ ಸುದ್ದಿ ತಿಳಿದು ಬಂತು.
ಯುವದಸರಾ ವೇಳೆಯಲ್ಲಿ ವೇದಿಕೆ ಮೇಲೆಯೇ ಚಂದನ್ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿ, ವಿವಾದಕ್ಕೀಡಾಗಿದ್ದರು. ಬಳಿಕ ಇವರಿಬ್ಬರು ತಮ್ಮ ತಮ್ಮ ಸಂಪ್ರದಾಯದ ಪ್ರಕಾರ ವಿವಾಹವಾದರು. ಬಳಿಕ ಹಲವು ರಿಯಾಲಿಟಿ ಶೋಗಳಲ್ಲಿ ಈ ದಂಪತಿ ಭಾಗವಹಿಸಿ, ಉತ್ತಮ ಪರ್ಫಾಮೆನ್ಸ್ ಕೂಡ ಕೊಟ್ಟಿದ್ದರು. ಇಬ್ಬರೂ ಜೋಡಿಯಾಗಿ ರೀಲ್ಸ್ ಕೂಡ ಮಾಡುತ್ತಿದ್ದರು.
ಆದರೆ ಕೆಲ ದಿನಗಳಿಂದ ನಿವೇದಿತಾ ಚಂದನ್ ಮಾಧ್ಯಮದ ಎದುರಿಗಷ್ಟೇ ಚೆನ್ನಾಗಿದ್ದಾರೆ, ಅವರ ವೈವಾಹಿಕ ಜೀವನ ಅಷ್ಟಕ್ಕಷ್ಟೆ ಅಂತಾ ಹೇಳಲಾಗಿತ್ತು. ಅದರಂತೆ ನಿವೇದಿತಾ ಒಬ್ಬರೇ ಸಖತ್ ಬೋಲ್ಡ್ ಆಗಿ, ರೀಲ್ಸ್ ಮಾಡತೊಡಗಿದ್ದರು. ಇದೀಗ ಇವರಿಬ್ಬರು ಡಿವೋರ್ಸ್ ತೆಗೆದುಕೊಳ್ಳಲಿದ್ದಾರೆಂದು ಹೇಳಲಾಗಿದೆ.