Friday, November 14, 2025

Latest Posts

ಪ್ರಪಂಚದ ವಿಚಿತ್ರ ಪಕ್ಷಿಗಳಿವು.. ಇವು ಅಷ್ಟು ಸುಲಭವಾಗಿ ಕಾಣ ಸಿಗಲ್ಲಾ…

- Advertisement -

ಈ ಪ್ರಪಂಚದಲ್ಲಿ ಹಲವಾರು ವಿಚಿತ್ರ ಸಂಗತಿಗಳಿದೆ. ವಿಚಿತ್ರ ರೀತಿಯ ತಿಂಡಿ, ವಿಚಿತ್ರ ರೀತಿಯ ಮನುಷ್ಯರು, ಪ್ರಾಣಿ ಪಕ್ಷಿ ಇತ್ಯಾದಿಗಳನ್ನ ನಾವು ನೋಡಿರ್ತೀವಿ. ಇನ್ನೂ ಕೆಲವು ವಿಚಿತ್ರಗಳು ಬರೀ ಫೋಟೋ, ವೀಡಿಯೋಗಳಲ್ಲಷ್ಟೇ ಕಾಣ ಸಿಗುತ್ತದೆ. ಆದ್ರೆ ಪ್ರತ್ಯಕ್ಷವಾಗಿ ನೋಡೋದು ಅಷ್ಟು ಸುಲಭವಲ್ಲ. ಈ ರೀತಿಯ ವಿಚಿತ್ರ ಪಕ್ಷಿಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಮೊದಲನೇಯದಾಗಿ ವೊಗೆಲ್ಕೊಪ್ ಸೂಪರ್ ಬರ್ಡ್‌ ಆಫ್ ಪ್ಯಾರಡೈಸ್. ಈ ಪಕ್ಷಿ ನೋಡಲು ಸುಂದರವಾಗಿದ್ದು, ರೆಕ್ಕೆ ಬಿಚ್ಚಿ ಡಾನ್ಸ್ ಮಾಡತ್ತೆ. ಇದು ತನ್ನ ನೃತ್ಯ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಪಕ್ಷಿ  ನೋಡಲು ಚಿಕ್ಕದಾಗಿದ್ದು, ಆಕರ್ಷಕವಾಗಿರುತ್ತದೆ. ಈ ಪಕ್ಷಿ ಕಾಣ ಸಿಗುವುದು ತುಂಬಾನೇ ಅಪರೂಪ. ಇನ್ನು ಈ ಪಕ್ಷಿಗಳಲ್ಲಿ ಗಂಡು ಪಕ್ಷಿಗಳು ಹೆಚ್ಚಾಗಿದ್ದು, ಹೆಣ್ಣು ಪಕ್ಷಿಗಳ ಸಂಖ್ಯೆ ತುಂಬಾನೇ ಕಡಿಮೆಯಾಗಿರುತ್ತದೆ. ಹಾಗಾಗಿ ಗಂಡು ಪಕ್ಷಿಗಳು ಡಾನ್ಸ್‌ ಮೂಲಕ ಹೆಣ್ಣು ಪಕ್ಷಿಯನ್ನ ಇಂಪ್ರೆಸ್ ಮಾಡೋಕ್ಕೆ ಪ್ರಯತ್ನಿಸುತ್ತೆ.

ಎರಡನೇಯದಾಗಿ ಮ್ಯಾಂಡರಿನ್ ಡಕ್. ಇದು ಪ್ರಪಂಚದ ಅತೀ ಸುಂದರವಾದ ಬಾತುಕೋಳಿ. 6ರಿಂದ 7 ಬಣ್ಣಗಳನ್ನೊಳಗೊಂಡ ಈ ಬಾತುಕೋಳಿ ನೋಡಲು ತುಂಬಾನೇ ಚೆಂದವಾಗಿರುತ್ತದೆ. ಕೆಲ ದೇಶಗಳಿಗೆ ಇದನ್ನು ರಫ್ತು ಮಾಡಲಾಗತ್ತೆ. ಜನ ಈ ಬಾತುಕೋಳಿಯನ್ನ ಸಾಕುತ್ತಾರೆ. ಅಲ್ಲದೇ ಕೆಲ ದೇಶಗಳಲ್ಲಿ ಇದನ್ನು ಶ್ರದ್ಧೆ ಮತ್ತು ನಿಯತ್ತಿಗೆ ಹೋಲಿಸಲಾಗುತ್ತದೆ.

ಮೂರನೇಯದು ರೆಸ್‌ಪ್ಲೆಂಡೆಂಟ್ ಕ್ವೇಜಲ್. ಇದು ಥೇಟ್ ಗಿಳಿ ಮರಿಯ ರೀತಿಯೇ ಕಾಣುತ್ತದೆ. ಇದು ಬಾಲವನ್ನು ಹೊಂದಿರುವ ಸುಂದರವಾದ ಪಕ್ಷಿಯಾಗಿದೆ. ಇದರ ಕಣ್ಣಿನ ದೃಷ್ಟಿ ಎಷ್ಟು ಸೂಕ್ಷ್ಮವೆಂದರೆ, ರಾತ್ರಿ ವೇಳೆಯೂ ಈ ಪಕ್ಷಿ ಎಲ್ಲವನ್ನೂ ಸ್ಪಷ್ಟವಾಗಿ ನೋಡುತ್ತದೆ. ಕೆಲ ದೇಶದಲ್ಲಿ ಈ ಪಕ್ಷಿಯನ್ನು ಧನ ಮತ್ತು ಸ್ವಾತಂತ್ರ್ಯದ ಪ್ರತೀಕವೆಂದು ನಂಬಲಾಗುತ್ತದೆ.

ನಾಲ್ಕನೇಯದಾಗಿ ದಿ ಗ್ರೇಟರ್ ಸೇಜ್ ಗ್ರಾಸ್. ಇದು ಉತ್ತರ ಅಮೇರಿಕದ ದೊಡ್ಡ ಪಕ್ಷಿಯಾಗಿದ್ದು, ಇದನ್ನು ಗ್ರಾಸ್ ಬರ್ಡ್ ಅಂತಾನೂ ಕರಿಯಲಾಗುತ್ತದೆ. ಈ ಪಕ್ಷಿ ವಿಭಿನ್ನ ಮತ್ತು ಆಕರ್ಷಕ ದೇಹವನ್ನು ಹೊಂದಿದೆ. ಬೇರೆ ಪಕ್ಷಿಗಳಿಗೆ ಹೋಲಿಸಿದ್ರೆ, ಇದರ ಕೈ ವಿಭಿನ್ನವಾಗಿದೆ.

ಐದನೇಯದಾಗಿ ಸ್ಕಾರ್ಲೆಟ್ ಮಕಾವ್. ಇದು ಗಿಳಿ ಮರಿಯ ಜಾತಿಯ ಪಕ್ಷಿಯಾಗಿದ್ದು, ನೋಡೋಕ್ಕೆ ಕಲರ್‌ಫುಲ್ ಆಗಿ ಕಾಣತ್ತೆ. ಈ ಪಕ್ಷಿ ಕೂಡ ಅಪರೂಪದ ಪಕ್ಷಿಯಾಗಿದ್ದು, ಗಿಳಿ ಮರಿಗಿಂತಲೂ ಬುದ್ಧಿವಂತ ಪಕ್ಷಿಯಾಗಿದೆ.

- Advertisement -

Latest Posts

Don't Miss