ರಶ್ಮಿಕಾ ಮಂದಣ್ಣ ಒಬ್ಬ ಭಾರತೀಯ ರೂಪದರ್ಶಿ ಹಾಗೂ ಕನ್ನಡ ಚಿತ್ರನಟಿ. ತನ್ನ ವೃತ್ತಿಜೀವನವನ್ನು ಒಬ್ಬ ರೂಪದರ್ಶಿಯಾಗಿ ಪ್ರಾರಂಭಿಸಿದ ಅವರು ಕನ್ನಡ ಚಲನಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಿರಿಕ್ ಪಾರ್ಟಿಯ ನಂತರ ಕರ್ನಾಟಕ ಕ್ರಶ್ ಎನಿಸಿಕೊಂಡಿದ್ದ ಇವರನ್ನ ಇದೀಗ ನ್ಯಾಷನಲ್ ಕ್ರಶ್ 2020 ಎಂದು ಗೂಗಲ್ ಇಂಡಿಯಾ ಕರೆದಿದೆ.
ಕಿರಿಕ್ ಪಾರ್ಟಿ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಸಿನಿಮಾದ ರಿಲೀಸ್ ಡೇಟ್ ಸದ್ದಿಲ್ಲದೇ ಘೋಷಣೆ ಆಗಿದೆ. ದುಲ್ಖಾರ್ ಸಲ್ಮಾನ್, ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಅಭಿನಯದ ‘ಸೀತಾ ರಾಮಂ’ ಸಿನಿಮಾವು ಇದೇ ಆಗಸ್ಟ್ 5 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ಇನ್ನು ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಆದರೆ ಕನ್ನಡಕ್ಕೆ ಮಾತ್ರ ಡಬ್ ಆಗುತ್ತಿಲ್ಲ. ನಾಲ್ಕು ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲು ಹೊರಟಿರುವ ಚಿತ್ರತಂಡ, ಕನ್ನಡಕ್ಕೆ ಡಬ್ ಮಾಡುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಇದೆ. ಅದರಲ್ಲೂ ಈ ಸಿನಿಮಾದಲ್ಲಿ ಕನ್ನಡದ ನಟಿ ಇದ್ದೂ ಕೂಡ ಡಬ್ ಆಗದಿರುವುದು ಕನ್ನಡ ಸಿನಿಪ್ರಿಯರಲ್ಲಿ ಬೇಸರ ಉಂಟು ಮಾಡಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ