Saturday, April 19, 2025

Latest Posts

ರಶ್ಮಿಕಾ ಮಂದಣ್ಣ ,ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್…!

- Advertisement -

Film News:

ರಶ್ಮಿಕಾ ಹಾಗು ಅಲ್ಲು ಅರ್ಜುನ್ ಮತ್ತೆ ತೆರೆ ಮೇಲೆ  ಒಂದಾಗುತ್ತಿದ್ದಾರೆ. ಪುಷ್ಪ ಚಿತ್ರ ತಂಡ ಮತ್ತೆ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ.

ಪುಷ್ಪ ದಿ ರೂಲ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾದಲ್ಲಿ ಫಹಾದ್ ಪಾತ್ರ ಹೆಚ್ಚಾಗಿ ಇರಲಿದ್ದು, ಅಲ್ಲು ಅರ್ಜುನ್ ಮತ್ತು ಫಹಾದ್ ನಡುವಿನ ಮುಖಾಮುಖಿ, ಆಕ್ಷನ್ ದೃಶ್ಯಗಳು ಹೆಚ್ಚಾಗಿ ಇರಲಿದೆ ಎನ್ನಲಾಗುತ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕ ಮತ್ತು ಭಯಾನಕವಾಗಿರಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಇಂದಿನಿಂದ ಚಿತ್ರೀಕರಣ ಪ್ರಾರಂಭವಾದ ಬಗ್ಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ‘ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಪುಷ್ಪ ದಿ ರೂಲ್ ಇಂದು ಪೂಜೆ’ ಎಂದು ಹೇಳಿದ್ದಾರೆ. ಚಿತ್ರೀಕರಣದ್ಲಲಿ ಭಾಗಿಯಾಗಲು ತುಂಬಾ ಎಕ್ಸಾಯಿಟ್ ಆಗಿದ್ದ ರಶ್ಮಿಕಾ ಇಂದಿನಿಂದ ಪುಷ್ಪ2 ಶೂಟಿಂಗ್‌ಗೆ ಹಾಜರಾಗಿದ್ದಾರೆ. ಭಾಗ-2ನಲ್ಲಿ ಏನೆಲ್ಲ ಬದಲಾವಣೆಗಳು ಆಗಲಿದೆ, ಅಲ್ಲು ಅರ್ಜುನ್ ಅಬ್ಬರ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ  ಕಾಯುತ್ತಿದ್ದಾರೆ.

ಕುತೂಹಲ ಮೂಡಿಸಿದ ಅಮಿತ್ ಷಾ, ಜೂ.ಎನ್.ಟಿ.ಆರ್ ಭೇಟಿ..!

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ

ಎರಡನೇ ಮದುವೆ ಆಗ್ತಾರಾ ಮೇಘನಾರಾಜ್..?!

- Advertisement -

Latest Posts

Don't Miss