ಸೌತ್ ಇಂಡಸ್ಟ್ರೀಯಲ್ಲಿ ಮೋಸ್ಟ್ ಬ್ಯುಸಿಯೆಸ್ಟ್ ನಟಿಯಾಗಿದ್ದ ಕಿರಿಕ್ ಬ್ಯೂಟಿ ರಶ್ಮಿಕಾ ಇದೀಗ ಬಾಲಿವುಡ್ ಅಂಗಳದಲ್ಲಿಯೂ ಮ್ಯಾಜಿಕ್ ಮಾಡೋದಿಕ್ಕೆ ರೆಡಿಯಾಗಿದ್ದಾಳೆ. ಈಗಾಗ್ಲೇ ಎರಡು ಸಿನಿಮಾಗಳಿಗೆ ಸಹಿ ಹಾಕಿರುವ ರಶ್ಮಿಕಾ ಇದೀಗ ಮುಂಬೈನಲ್ಲಿ ಐಶಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ ಎನ್ನಲಾಗ್ತಿದೆ.

ಕಾಲಿವುಡ್, ಟಾಲಿವುಡ್ ಸಿನಿಮಾ ಒಪ್ಪಿಕೊಂಡ ಬಳಿಕ ಹೈದ್ರಾಬಾದ್ ನಲ್ಲಿ ಸೆಟಲ್ಡ್ ಆಗಿದ್ದ ಕೊಡಗಿನ ಕುವರಿ ಮತ್ತಿನ ನಗರಿಯಲ್ಲೊಂದು ಫ್ಲ್ಯಾಟ್ ಖರೀದಿಸಿದ್ರು. ಇದೀಗ ಮುಂಬೈನಲ್ಲಿಯೂ ಮನೆ ಖರೀದಿಸಿದ್ದಾರಂತೆ.
ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಮಿಷನ್ ಮಂಜು ಚಿತ್ರದಲ್ಲಿ ನಟಿಸ್ತಿರುವ ರಶ್ಮಿಕಾ ಮುಂಬೈನಲ್ಲಿ ಉಳಿದುಕೊಳ್ಳಬೇಕು. ಹೀಗಾಗಿ ಹೋಟೆಲ್ ನಲ್ಲಿ ಉಳಿದುಕೊಳ್ಳುವ ಬದಲು ಅಲ್ಲಿಯೇ ಮನೆ ಖರೀದಿಸಿದ್ದಾರಂತೆ. ಈ ಸಿನಿಮಾ ಮುಕ್ತಾಯವಾಗ್ತಿದ್ದಂತೆ ಅಮಿತಾ ಬಚ್ಚನ್ ನಟಿಸ್ತಿರುವ ಸಿನಿಮಾವೊಂದರಲ್ಲಿ ರಶ್ಮಿಕಾ ಬಣ್ಣ ಹಚ್ಚಲಿದ್ದಾರೆ.
