- Advertisement -
ಟ್ರೋಲ್ ಗಳಿಗೆ ಖಡಕ್ ಉತ್ತರಿಸಿದ ರಶ್ಮಿಕಾ ಮಂದಣ್ಣ.!
ಕನ್ನಡತಿಯಾದರೂ ಕನ್ನಡದಲ್ಲಿ ಮಾತನಾಡದೇ ರಶ್ಮಿಕಾ ಟ್ರೋಲ್ ಆಗಿದ್ದು ಇದೆ. ಇದೀಗ ರಶ್ಮಿಕಾ ಕಾಂತರ ಸಿನಿಮಾ ವಿಚಾರ ಮತ್ತು ಬ್ಯಾನ್ ವಿಚಾರವಾಗಿ ಮೌನ ಮುರಿದಿದ್ದಾರೆ.
ಸಿನಿಮಾ ವೀಕ್ಷಿಸಿಲ್ಲ ಎಂದು ಉತ್ತರಿಸಿದರು. ಕನ್ನಡದವರಾಗಿ ತಮಗೆ ವೃತ್ತಿಜೀವನ ಆರಂಭಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕನ ಸಿನಿಮಾ ನೋಡಿಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು.
ಕನ್ನಡ ಚಲನಚಿತ್ರೋದ್ಯಮವು ನಟಿಯ ಮೇಲೆ ಬ್ಯಾನ್ ಹೇರಲು ಯೋಜಿಸುತ್ತಿದೆ ಎಂಬ ಊಹಾಪೋಹಗಳು ಸಹ ಕೇಳಿಬಂದಿದ್ದವು.
ಬಿಡುಗಡೆಯಾದ ಎರಡು ದಿನಗಳ ನಂತರ ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ನನ್ನನ್ನು ಕೇಳಿದರು ಮತ್ತು ನಾನು ಆಗ ನೋಡಿರಲಿಲ್ಲ.
ಆ ನಂತರ ನಾನು ನೋಡಿ ಚೆನ್ನಾಗಿದೆ ಎಂದು ತಿಳಿಸಿದೆ, ಅದಕ್ಕೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದರು..
- Advertisement -