Film News : ಕಿರಿಕ್ ಪಾರ್ಟಿ ಬೆಡಗಿ ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ ಹಾಗಂತ ಆಕೆಯೇ ಬಾಯಿಬಿಟ್ಟು ಹೇಳಿದ್ದಾರೆ. ಹಾಗಿದ್ರೆ ಕಿರಿಕ್ ಬೆಡಗಿ ಮದುವೆ ಆಗಿರೋದಾದ್ರು ಯಾರನ್ನು ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ……….
ರಶ್ಮಿಕಾ ಮಂದಣ್ಣ ತನ್ನ ಕಿರಿಕ್ ಮ ಊಲಕವೇ ಅಧಿಕ ಸುದ್ದಿಯಲ್ಲಿರೋ ನಟಿ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಕಿರಿಕ್ ಬೆಡಗಿ ಹೆಸರು ಕೇಳಿ ಬರುತ್ತಿದೆ.
ಕನ್ನಡದ ಸ್ಟಾರ್ ನಟನ ಜೊತೆ ನಿಶ್ಚಿತಾರ್ಥ ಮುರಿದು ಬಿದ್ದ ಮೇಲೆ ಸಿನಿಮಾಗಳಲ್ಲಿ ಮಿಂಚುವುದು ಅವರ ಅಧ್ಯತೆಯಾಯ್ತು. ಈಗ ಸೌತ್‌ನಲ್ಲಿಯೇ ರಶ್ಮಿಕಾ ಮಂದಣ್ಣ ಸೆಟಲ್ ಆಗಿದ್ದಾರೆ. ಪುಷ್ಪ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಕಂಗೊಳಿಸುತ್ತಿದ್ದಾರೆ. ಹೀಗಿರುವಾಗ ಮದುವೆ ವಿಚಾರವಾಗಿ ಮತ್ತೆ ನಟಿ ಚಾಲ್ತಿಗೆ ಬಂದಿದ್ದಾರೆ.
ನನ್ನ ಮನಸ್ಸಿನಲ್ಲಿ ಆತ ಇದ್ದಾನೆ. ಈಗಾಗಲೇ ಸೀಕ್ರೆಟ್ ಆಗಿ ಮದುವೆ ಕೂಡ ಆಗಿದ್ದೀನಿ ಎಂದು ಹೇಳಿದ್ದಾರೆ. ಇದನ್ನು ಕೇಳಿ ಕೆಲವರು ಶಾಕ್ ಆಗಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆ ರಶ್ಮಿಕಾ ಭಾಗಿ ಆಗಿದ್ದರು.
ಈ ವೇಳೆ ನಿರೂಪಕನ ಪ್ರಶ್ನೆಗೆ ನಟಿ ಫನ್ನಿಯಾಗಿ ಉತ್ತರಿಸಿದ್ದಾರೆ. ನನಗೆ ನರುಟೊ ಜೊತೆ ಮದುವೆ ಆಗೋಗಿದೆ. ನನ್ನ ಮನಸ್ಸಿನಲ್ಲಿ ಆತನೇ ಇರೋದು ಎಂದು ಹೇಳಿದ್ದರು. ನರುಟೊ ಅನ್ನೋದು ಫೇಮಸ್ ಎನಿಮೆ ಕಾರ್ಟೂನ್ ಸೀರಿಸ್‌ನಲ್ಲಿ ಬರುವ ಒಂದು ಪಾತ್ರ ಅಷ್ಟೆ. ಇಂತಹ ಕಾರ್ಟೂನ್‌ಗಳಿಗೆ ದೊಡ್ಡ ಅಭಿಮಾನಿ ಬಳಗ ಇರುತ್ತದೆ. ಅಂತಹವರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.
ಈ ಹಿಂದೆ ಕೂಡ ರಶ್ಮಿಕಾ ಮಂದಣ್ಣ ನರುಟೊ ಕಾರ್ಟೂನ್ ಕ್ಯಾರೆಕ್ಟರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನರುಟೊ ಪುಟ್ಟ ಗೊಂಬೆ ಹಿಡಿದು ನನ್ನ ಶಾಶ್ವತ ಪ್ರಿಯಕರ ಎಂದು ಬರೆದುಕೊಂಡಿದ್ದರು. ಒಟ್ನಲ್ಲಿ ರಶ್ಮಿಕಾ ಮ್ಯಾರೇಜ್ ಸ್ಟೋರಿ ಕೇಳಿ ಫ್ಯಾನ್ಸ್ ಮನಸಾರೆ ನಕ್ಕಿದ್ದಾರೆ.
Kaira adwani: ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ ಬಾಲಿವುಡ್ ನಟಿ ಕಿಯಾರಾ ಅದ್ವಾನಿ