National Political News: ಕೇಂದ್ರ ಸರ್ಕಾರದ ಬಳಿ ಹೋಗಿ ನನ್ನ ಸಲುವಾಗಿ, ನಾನು ಏನನ್ನಾದರೂ ಕೇಳುವುದಕ್ಕಿಂತ, ನಾನು ಸಾಯುವುದೇ ಲೇಸು ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ, ಶಿವರಾಜ್ ಸಿಂಗ್ ಚೌಹಾಣ ಹೇಳಿದ್ದಾರೆ.
ಇಂದು ವಿದಾಯ ಭಾಷಣ ಮಾಡುವಾಗ ಗದ್ಗದಿತರಾದ ಚೌಹಾಣ್ ಈ ಮಾತನ್ನು ಹೇಳಿದ್ದಾರೆ. ಅಲ್ಲದೇ, ಮೋಹನ್ ಯಾದವ್ ಅವರನ್ನು ಸಿಎಂ ಮಾಡಿಸುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ. ಈ ಮೂಲಕ ಮಧ್ಯಪ್ರದೇಶ ಅಭಿವೃದ್ಧಿ ಹೊಂದುತ್ತದೆ. ಇದಕ್ಕಾಗಿ ನಾನು ಮೋಹನ್ ಯಾದವ್ ಅವರನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.
ಉಮಾಭಾರತಿಯವರ ಪರಿಶ್ರಮದಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2005ರಲ್ಲಿ ನಾವು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದೆ. ಇಷ್ಟು ನಾನು ಸಿಎಂ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ನನಗೆ ತೃಪ್ತಿ ಇದೆ. ಆದರೆ ನಾನು ಈಗ ಕೇಂದ್ರದ ಬಳಿ ಹೋಗಿ, ನನಗಾಗಿ ಏನನ್ನಾದರೂ ಕೇಳುವ ಬದಲು, ಸಾಯುವುದೇ ಮೇಲು. ಹಾಗಾಗಿ ನಾನು ಏನನ್ನೂ ಕೇಳಲು ಹೋಗುವುದಿಲ್ಲ. ಇಲ್ಲಿನ ಜನರೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದೆ. ನನ್ನ ಉಸಿರಿರುವವರೆಗೂ ಈ ಬಾಂಧವ್ಯ ಹೀಗೆ ಇರುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
‘ಹರಿಪ್ರಸಾದ್ ರನ್ನ ಹೊರತುಪಡಿಸಿ ಒಂದು ಸಮಾವೇಶ ಮಾಡ್ತಿಲ್ವಾ. ಎಲ್ಲವೂ ನನಗೆ ಗೊತ್ತಿದೆ’
ಲೋಕಸಭೆಯಲ್ಲಿ ನಮ್ಮ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿಗೆ ಸಂಸದೆ ಸುಮಲತಾ ವಿನಂತಿ
ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್