Friday, December 27, 2024

Latest Posts

ಮತದಾರರಿಗೆ ವಿತರಿಸಲು ನ್ಯಾಯಬೆಲೆ ಅಂಗಡಿಯಿಂದ ಪಡಿತರ ಅಕ್ಕಿ ಬಳಕೆ

- Advertisement -

ಕೋಲಾರ .

ವಿಧಾನ‌ ಸಭಾ ಚುನಾವಣೆ ಹಿನ್ನಲೆ ಮತದಾರರನ್ನು ಓಲೈಸಲು ಮತದಾರರಿಗೆ ಉಡುಗೊರೆಯಾಗಿ ನೀಡಲು ನ್ಯಾಯ ಬೆಲೆ ಅಂಗಡಿಗಳ‌ ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ  ಮಾಡಲು  ಅಕ್ರಮ ಅಕ್ಕಿ ‌ಸಾಗಾಣಿಕೆ ನಡೆಯುತಿತ್ತು. ಈ ನ್ನು ಈ ಅಕ್ಕಿ ಮೂಟೆಗಳನ್ನು ಹೊಸಕೋಟೆ ಯಿಂದ‌ ಕೋಲಾರಕ್ಕೆ ತೆಗೆದುಕೋಂಡು ಹೋಗುತಿದ್ದರು ಈ ವೇಳೆ ಅಕ್ಕಿ ತುಂಬಿಕೊಂಡು ಬರುತ್ತಿರುವ ಅಶೋಕ್ ಲೇಲ್ಯಾಂಡ್ ಲಾರಿಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಈ ಅಕ್ಕಿ ಮೂಟೆಗಳನ್ನು ಕೋಲಾರ ಜಿಲ್ಲೆಯಯ ಅಮ್ಮವಾರಿಪೇಟೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಸಂಗ್ರಹಿಸಲಾಗಿದೆ.ಇನ್ನು ಈ ಅಕ್ಕಿ ಮೂಟೆಗಳನ್ನು ಅಂಗಡಿಯಲ್ಲಿ ಖರೀದಿ ಮಾಇಕೊಂಡು ತಂದಿರುವುದಲ್ಲ ಬದಲಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ವಿತರಣೆ ಮಾಡುವ ಅಕ್ಕಿ ಮೂಟೆಗಳನ್ನು ಮತದಾರರಿಗೆ ವಿತರಿಸುವ ಮೂಲಕ ಮತ ಸೆಳೆಯುವ ಪ್ಲಾನ್ ಹಾಕಿಕೊಂಡಿದ್ದರು.

ಇನ್ನು ಈ ಅಕ್ಕಿ ಮೂಟೆ ತುಂಬಿದ ಲಾರಿಯನ್ನು ವೇಮಗಲ್ ಠಾಣಾ ಪೋಲಿಸರು ಕೋಲಾರ ಗಡಿ ರಾಮಸಂದ್ರಗೇಟ್ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದುಕೊಂಡಿರುತ್ತಾರೆ.ನಂತರ ಲಅರಿಯನ್ನು ಚಾಲನೆ ಮಾಡುತಿದ್ದ  ಲಾರಿ ಚಾಲಕ ಆಸಿಮ್ ಖಾನ್ ಹಾಗೂ ಮಾಲೀಕ ರಘು ರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆದರೆ ಇದುವರೆಗೂ ಅಕ್ಕಿ ಮೂಟೆ  ರಾಜಕೀಯ ಪಕ್ಷಕ್ಕೆ ಸೇರಿದ್ದು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಗುರುದೇವ್ ಹೊಯ್ಸಳ

ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ

ರಾಯಚೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ರಾಜಮೌಳಿ ಆಯ್ಕೆ

- Advertisement -

Latest Posts

Don't Miss